ಯೋಗಾ ಕ್ಲಾಸ್ ನಲ್ಲಿ ಪ್ರಿಯಕರ ಪತ್ನಿ; ಸುಪಾರಿ ಕೊಟ್ಟು ಪತಿಯನ್ನೇ ಮುಗಿಸಿದ ಹಂತಕಿ!

ಹಾಸನ: ಯೋಗಾ ಕ್ಲಾಸ್ ನಲ್ಲಿ ಪ್ರಿಯಕರನೊಂದಿಗೆ ಇದ್ದದ್ಧನ್ನು ಕಂಡ ಪತಿಯನ್ನು ತಾನೇ ಪ್ರಿಯಕರನಿಗೆ ತಿಳಿಸಿ ಸುಫಾರಿ ಕೊಟ್ಟು ಹತ್ಯೆಗೈಯಿಸಿದಂತ ಘನಘೋರ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾವಲು ಹೊಸೂರು ಗೇಟ್ ಬಳಿಯಲ್ಲಿ…

crime vijayaprabha news

ಹಾಸನ: ಯೋಗಾ ಕ್ಲಾಸ್ ನಲ್ಲಿ ಪ್ರಿಯಕರನೊಂದಿಗೆ ಇದ್ದದ್ಧನ್ನು ಕಂಡ ಪತಿಯನ್ನು ತಾನೇ ಪ್ರಿಯಕರನಿಗೆ ತಿಳಿಸಿ ಸುಫಾರಿ ಕೊಟ್ಟು ಹತ್ಯೆಗೈಯಿಸಿದಂತ ಘನಘೋರ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾವಲು ಹೊಸೂರು ಗೇಟ್ ಬಳಿಯಲ್ಲಿ ಜನವರಿ 31ರಂದು ನಡೆದಿದ್ದಂತ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ನುಗ್ಗೇಹಳ್ಳಿ ಪೊಲೀಸರು ಯಶಸ್ವಿಯಾಗಿದ್ದು, ಹತ್ಯೆಯ ಹಿಂದಿನ ರಹಸ್ಯವನ್ನು ಬೇಧಿಸಿದ್ದಾರೆ.

ಜನವರಿ 31ರಂದು ಮಕ್ಕಳನ್ನು ಶಾಲೆಯಿಂದ ಕರೆತರೋದಕ್ಕೆ ತೆರಳಿದ್ದಂತ ಆನಂದ್ ಕುಮಾರ್ (42) ಎಂಬಾತನನ್ನು,ಕಾವಲು ಹೊಸೂರು ಗೇಟ್ ಬಳಿಯಲ್ಲಿ ಇಬ್ಬರು ಅಪರಿಚಿತರು ಅಡ್ಡಗಟ್ಟಿ, ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದರು.

Vijayaprabha Mobile App free

ಈ ಪ್ರಕರಣ ಕುರಿತಂತೆ ವಿವಿಧ ಹಂತಗಳಲ್ಲಿ ವಿಚಾರಣೆ ನಡೆಸಿದಂತ ಎಸ್ ಪಿ ಶ್ರೀನಿವಾಸಗೌಡ ವಿಶೇಷ ತಂಡದ ತನಿಖಾ ಪೊಲೀಸರಿಗೆ, ಆನಂದ್ ಕುಮಾರ್ ಪತ್ನಿ,ಸುನೀತಾಳ ಬಗ್ಗೆಯೇ ಅನುಮಾನ ಮೂಡತೊಡಗಿತ್ತು. ಆಕೆಯನ್ನು ವಿಚಾರಣೆಗೆ ಒಳಡಿಸಿದ್ರೂ ತಾನು ಪತಿಯ ಕೊಲೆಗೆ ಕಾರಣವಲ್ಲ ಎಂಬುದಾಗಿ ನಾಟಕವಾಡಿದ್ದರು.

ಇನ್ನು, ಪೊಲೀಸರು ತಮ್ಮ ಶೈಲಿಯಲ್ಲಿ ಸುನೀತಾಳನ್ನು ವಿಚಾರಿಸಿದಾಗ ಆನಂದ್ ಕುಮಾರ್ ಹತ್ಯೆಯ ಹಿಂದಿನ ರಹಸ್ಯ ಬಿಚ್ಚಿಟ್ಟಿದ್ದು, ತಾನೇ ಪ್ರಿಯಕರನಿಗೆ ತಿಳಿಸಿ, ಪತಿಯನ್ನು ಸುಫಾರಿ ಕೊಟ್ಟು ಹತ್ಯೆಗೈಯಿಸಿದಂತ ಮಾಹಿತಿಯನ್ನು ತಿಳಿಸಿದ್ದಾಳೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.