ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡವು 7 ರನ್ ಗಳ ಗೆಲುವು ಸಾಧಿಸಿದೆ.
ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟದೊಂದಿಗೆ 157 ರನ್ ಗಳನ್ನಷ್ಟೇ ಕಲೆಹಾಕುವಲ್ಲಿ ಶಕ್ತವಾಯಿತು. ಚೆನ್ನೈ ಪರ, ಪ್ಲೆಸ್ಸಿಸ್-22, ಧೋನಿ-47* & ಜಡೇಜಾ-50, ಕುರ್ರನ್-15 ರನ್ ಕಲೆಹಾಕಿದ್ದು, ಉಳಿದ ಯಾರೊಬ್ಬರೂ ಎರಡಂಕಿ ದಾಟಲಿಲ್ಲ . ಹೈದರಾಬಾದ್ ಪರ, ನಟರಾಜನ್-2, ಭುವನೇಶ್ವರ್ & ಅಬ್ದುಲ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುಂಚೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ತಂಡ ಆರಂಭಿಕ ಆಟಗಾರ ನಾಯಕ ಡೇವಿಡ್ ವಾರ್ನರ್-28, ಮನೀಶ್ ಪಾಂಡೆ-29, ಪ್ರಿಯಮ್ ಗರ್ಗ್-51, ಅಭಿಷೇಕ್ ಶರ್ಮಾ-31 ಅವರ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತು. ಚೆನ್ನೈ ಪರ ದೀಪಕ್ ಚಾಹರ್ 2, ಶಾರ್ದುಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದರು.
ಸನ್ ರೈಸರ್ಸ್ ತಂಡದ ಪರ ಅಮೋಘ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದ ಪ್ರಿಯಮ್ ಗರ್ಗ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಇದನ್ನು ಓದಿ: ಅರೆನಗ್ನ ಫೋಟೋ ಪೋಸ್ಟ್ ಮಾಡಿ ತನ್ನ ದೇಹದ ಭಾಗಗಳನ್ನು ವರ್ಣಿಸಿ ಸಂಚಲನ ಮೂಡಿಸಿದ ಹಾಟ್ ಬ್ಯುಟಿ ಇಲಿಯಾನ…?