Rama Navami | ಇಂದು ರಾಮ ನವಮಿ..? ಪುರಾಣ ಕಥೆ ಹಾಗೂ ಮಹತ್ವ ಇಲ್ಲಿದೆ

Rama Navami : ಹಿಂದೂ ಕ್ಯಾಲೆಂಡರ್ ಪ್ರಕಾರ, ರಾಮನವಮಿ (Rama Navami) ಭಗವಾನ್ ಶ್ರೀರಾಮನ ಜನ್ಮದಿನವಾಗಿದ್ದು, ರಾಮಾಯಣ ಪಠನೆ, ಉಪವಾಸ, ಹಾಗೂ ರಾಮನಾಮ ಜಪದ ಮೂಲಕ ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಎಲ್ಲಾ ಶ್ರೀ ರಾಮ ಭಕ್ತರು…

Sri Rama Navami

Rama Navami : ಹಿಂದೂ ಕ್ಯಾಲೆಂಡರ್ ಪ್ರಕಾರ, ರಾಮನವಮಿ (Rama Navami) ಭಗವಾನ್ ಶ್ರೀರಾಮನ ಜನ್ಮದಿನವಾಗಿದ್ದು, ರಾಮಾಯಣ ಪಠನೆ, ಉಪವಾಸ, ಹಾಗೂ ರಾಮನಾಮ ಜಪದ ಮೂಲಕ ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಎಲ್ಲಾ ಶ್ರೀ ರಾಮ ಭಕ್ತರು ಈ ಹಬ್ಬವನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ರಾಮನವಮಿ ದಿನಾ೦ಕ ಹಾಗೂ ಮಹತ್ವ ಇಲ್ಲಿ ತಿಳಿದುಕೊಳ್ಳೋಣ.

ಶ್ರೀ ರಾಮ ನವಮಿ ಯಾವಾಗ?

ಹಿಂದೂ ಕ್ಯಾಲೆಂಡರ್ ಪ್ರಕಾರ, ಚೈತ್ರ ಮಾಸದ ಶುಕ್ಲಪಕ್ಷ ನವಮಿ ತಿಥಿ ಏಪ್ರಿಲ್ 5 ರ ಸಂಜೆ 7:26 ಗಂಟೆಗೆ ಪ್ರಾರಂಭವಾಗುತ್ತದೆ. ಈ ತಿಥಿ ಏಪ್ರಿಲ್ 6 ರಂದು ಸಂಜೆ 7:22 ಗಂಟೆಗೆ ಮುಕ್ತಾಯವಾಗುತ್ತದೆ. ಹಿಂದೂ ಧರ್ಮದಲ್ಲಿ ಉದಯತಿಥಿಯನ್ನು ಪ್ರಾಥಮಿಕವಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ, ಈ ವರ್ಷ ರಾಮನವಮಿಯನ್ನು ಏಪ್ರಿಲ್ 6 ರಂದು ಆಚರಿಸಲಾಗುತ್ತದೆ.

ರಾಮ ನವಮಿ ಪುರಾಣ ಕಥೆ

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಕೋಸಲ ರಾಜ ದಶರಥನಿಗೆ ಮೂವರು ಹೆಂಡತಿಯರಿದ್ದರು. ಕೌಸಲೈಯು ರಾಮನಿಗೆ ಜನ್ಮವನ್ನು ನೀಡಿದರೆ, ಕೈಕೇಯಿಯು ಭರತನಿಗೆ ಜನ್ಮ ನೀಡುತ್ತಾಳೆ ಮತ್ತು ಸುಮಿತ್ರೆಯು ಲಕ್ಷ್ಮಣ ಹಾಗೂ ಶತ್ರುಘ್ನನಿಗೆ ಜನ್ಮವನ್ನು ನೀಡಿದಳು. ಅ೦ದಿನಿ೦ದ ಭಗವಾನ್ ಶ್ರೀ ರಾಮನ ಜನ್ಮ ದಿನವನ್ನು ವಿಶ್ವದಾದ್ಯಂತ ಹಿಂದೂ ಭಕ್ತರು ಬಹಳ ವೈಭವದಿಂದ ಆಚರಿಸುತ್ತಾರೆ.

Vijayaprabha Mobile App free

ರಾಮ ನವಮಿಯ ಮಹತ್ವ

  • ಹಿ೦ದೂ ಧರ್ಮದ ಅತ್ಯಂತ ಪವಿತ್ರವಾದ ಹಬ್ಬವಾಗಿದೆ.
  • ಧರ್ಮವನ್ನು ಸ್ಥಾಪಿಸಲು & ಅಧರ್ಮವನ್ನು ನಾಶಮಾಡಲು ಮಹಾವಿಷ್ಣು ಅವತರಿಸಿದ ದಿನ.
  • ಈ ದಿನ ಭಕ್ತರು ರಾಮಾಯಣ, ರಾಮಚರಿತಮಾನಸ್ ಅನ್ನು ಪಠಿಸುತ್ತಾರೆ.
  • ಭಗವಾನ್ ರಾಮ ಆದರ್ಶ ಮಾನವ, ನೀತಿ, ಶೌರ್ಯ & ಧೈರ್ಯದ ಸಂಕೇತ ಶ್ರೀ ರಾಮನ ಹಬ್ಬವನ್ನು ಬಹಳ ವೈಭವದಿ೦ದ ಆಚರಿಸುತ್ತಾರೆ.

ರಾಮ ನವಮಿಯಂದು ಈ ವಸ್ತುಗಳನ್ನು ಮನೆಗೆ ತನ್ನಿ

  • ಹಳದಿ ಬಟ್ಟೆ ಮತ್ತು ಚಿನ್ನ : ರಾಮನವಮಿಯಂದು ಸ್ವಲ್ಪ ಚಿನ್ನ ಖರೀದಿಸಿ ಮನೆಗೆ ತರುವುದು ಶುಭಕರ. ಹಳದಿ ಬಣ್ಣವು ಶಾಂತಿ, ಸಮೃದ್ಧಿ & ಧನವನ್ನು ಆಕರ್ಷಿಸುತ್ತದೆ.
  • ಶಂಖ : ಶ್ರೀ ರಾಮನವಮಿಯ೦ದು ಶ೦ಖವನ್ನು ಖರೀದಿಸಿ ಮನೆಯಲ್ಲಿ ತರುವುದು ಕೂಡ ಶುಭಕರ. ಪೂಜಾಗೃಹದಲ್ಲಿ ಶಂಖವನ್ನು ಇರಿಸುವುದು ಪವಿತ್ರೆ ಹಾಗೂ ಶುಭಕರವಾದ ಕಾರ್ಯವೆಂದು ಭಾವಿಸಲಾಗುತ್ತದೆ.
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.