ಬೆಂಗಳೂರು: ಹೆಮ್ಮಾರಿ ಕೊರೊನಾದಿಂದ ರಾಜ್ಯದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಇಂತಹ ವಿಷಮ ಪರಿಸ್ಥಿತಿಯಲ್ಲಿ ಜನ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಸಿಎಂ ಯಡಿಯೂರಪ್ಪ ಸರ್ಕಾರ ಅವರ ನೆರವಿಗೆ ಮುಂದಾಗಿ ಒಟ್ಟು 1111.82 ಮೊತ್ತ ಮೌಲ್ಯದ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ಯಾವ ಕ್ಷೇತ್ರಕ್ಕೆ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ..
ತೋಟಗಾರಿಕೆ ಇಲಾಖೆ
1. ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ರೂ.10,000/- ರಂತೆ ಸಹಾಯ ನೀಡಲಾಗುವುದಲ್ಲದೆ, ಇದರಿಂದ ಸುಮಾರು 20,000 ರೈತರಿಗೆ ಸಹಕಾರಿಯಾಗಲಿದೆ. ಇದಕ್ಕಾಗಿ 12.73 ಕೋಟಿ ಮೀಸಲಿಡಲಾಗಿದೆ.
2.ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಗರಿಷ್ಠ 1 ಹೆಕ್ಟೇರ್ ಗೆ ಮಿತಿಗೊಳಿಸಿ ಪ್ರತಿ ಹೆಕ್ಟೇರ್ ಗೆ ರೂ.10,000/- ರಂತೆ ಸಹಾಯ ನೀಡುವುದಲ್ಲದೆ, ಇದರಿಂದ 69,000 ರೈತರಿಗೆ ಸಹಕಾರಿಯಾಗಲಿದ್ದು, ಇದಕ್ಕಾಗ 69.00 ಕೋಟಿ ಮೀಸಲಿಡಲಾಗಿದೆ.
ಸಾರಿಗೆ ಇಲಾಖೆ
1.ಆಟೋ ಮತ್ತು ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ (ಲೈಸೆನ್ಸ್ ಹೊಂದಿದ ಹಾಗೂ ನೋಂದಣಿ ಮಾಡಿಸಿದ) 3000/- ರೂಗಳನ್ನು ಪ್ರತಿ ಚಾಲಕರಿಗೆ ನೀಡುವುದಲ್ಲದೆ, ಇದರಿಂದ ಒಟ್ಟು 2.10 ಲಕ್ಷ ಫಲಾನುಭವಿಗಳು ಸಹಾಯವಾಗಲಿದ್ದು, ಅಲ್ಲದೆ ಇದಕ್ಕಾಗಿ 63.00 ಕೋಟಿ ಮೀಸಲಿಡಲಾಗಿದೆ.
ಕಾರ್ಮಿಕ ಇಲಾಖೆ
1. ಕಟ್ಟಡ ಕಾರ್ಮಿಕರಿಗೆ ತಲಾ ರೂ. 3000/- (ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಣಿ ಮಾಡಿಸಿದ ಕಾರ್ಮಿಕರಿಗೆ) ನೀಡುವುದಲ್ಲದೆ, ಇದಕ್ಕಾಗಿ 494 ಕೋಟಿ ಮೀಸಲಿಡಲಾಗಿದೆ.
2.ಅಸಂಘಟಿತ ಕಾರ್ಮಿಕರಿಗೆ ತಲಾ ರೂ.2,000/- (ಕ್ಷೌರಿಕರು, ಅಗಸರು, ಟೈಲರ್ಗಳು, ಹಮಾಲಿಗಳು, ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕ್ಗಳು, ಕಮ್ಮಾರರು, ಗೃಹ ಕಾರ್ಮಿಕರು, ಚಮ್ಮಾರರು) ಇನ್ನು ಒಟ್ಟು 3.04 ಲಕ್ಷ ಮಂದಿಗಳು ಫಲಾನುಭವಿಗಳಾಗಿದ್ದು ಇದಕ್ಕಾಗಿ 60.89 ಕೋಟಿ ಮೀಸಲಿಡಲಾಗಿದೆ.
3. ರಸ್ತೆ ಬದಿಯ ವ್ಯಾಪಾರಸ್ಥರು ತಲಾ ರೂ.2,000/- (ಆತ್ಮ ನಿರ್ಭರ್ ನಿಧಿಯಲ್ಲಿ ನೊಂದಣಿ ಹೊಂದಿದವರು) ಸಿಗಲಿದ್ದು, ಒಟ್ಟು 2.20 ಲಕ್ಷ ಫಲಾನುಭವಿಗಳಿದ್ದು, ಇದಕ್ಕಾಗಿ 44.00 ಕೋಟಿ ಮೀಸಲಿಡಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
1. ಕಲಾವಿದರು /ಕಲಾ ತಂಡಗಳಿಗೆ ತಲಾ ರೂ.3,000/ ನೀಡಲಾಗುತ್ತದೆ. ಇದರಿಂದ 16,095 ಫಲಾನುಭವಿಗಳಿಗೆ ಸಹಾಯವಾಗಲಿದ್ದು, ಒಟ್ಟು 4.82 ಕೋಟಿ ಮೀಸಲಿಡಲಾಗಿದೆ.




