ಅಗ್ಗದ ದರದಲ್ಲಿ ಚಿನ್ನ ಖರೀದಿಸಬೇಕೆನ್ನುವವರಿಗೆ ಸುವರ್ಣಾವಕಾಶವಿದ್ದು, RBI, ಸಾವರಿನ್ ಗೋಲ್ಡ್ ಬಾಂಡ್ ಸ್ಕೀಮ್ ನ 4ನೇ ಸರಣಿಯ ಮಾರಾಟವನ್ನು ಆರಂಭಿಸುತ್ತಿದ್ದು, ಪ್ರತಿ ಗ್ರಾಂ ಚಿನ್ನದ ಬೆಲೆಯನ್ನು 4,807 ರೂ. ನಿಗದಿಪಡಿಸಲಾಗಿದೆ.
ಚಿನ್ನದ ಬಾಂಡ್ ಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೆ, ಅವರಿಗೆ ಪ್ರತಿ ಗ್ರಾಂ 50ರೂ. ರಿಯಾಯಿತಿ ಸಿಗಲಿದ್ದು, ಈ ಮಾರಾಟ ಪ್ರಕ್ರಿಯೆ ಜುಲೈ 16ರವರೆಗೆ ಇರಲಿದ್ದು, ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿ ಗರಿಷ್ಠ 4 ಕೆಜಿ ಚಿನ್ನದ ಬಾಂಡ್ ಖರೀದಿಸಬಹುದು.
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ: ಎಲ್ಲೆಲ್ಲಿ ಖರೀದಿಸಬಹುದು?
ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಧಾನಿ ಮೋದಿ ಸರ್ಕಾರ, 2015ರಲ್ಲಿ ಆರಂಭಿಸಿದ್ದು, ಸಾವರಿನ್ ಗೋಲ್ಡ್ ಬಾಂಡ್ ಒಂದು ಸರ್ಕಾರಿ ಬಾಂಡ್ ಆಗಿದೆ.
ಇದನ್ನು ಡಿಮ್ಯಾಟ್ ರೂಪದಲ್ಲಿ ಬದಲಾಯಿಸಬಹುದಾಗಿದ್ದು, ಮೂಲಗಳ ಮಾಹಿತಿ ಪ್ರಕಾರ ಈ ಬಾಂಡ್ ಗಳನ್ನು ಎಲ್ಲಾ ಬ್ಯಾಂಕ್, ಅಂಚೆ ಕಚೇರಿ ಹಾಗೂ ಮಾನ್ಯತೆ ಪಡೆದ ಸ್ಟಾಕ್ ಎಕ್ಸ್ ಚೇಂಜ್, NSE, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್, BSE ಗಳ ಮೂಲಕ ಖರೀದಿಸಬಹುದು.