ಕೇಂದ್ರ ಸರ್ಕಾರ(central government) ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, CRPF (Central Reserve Police Force)ನಲ್ಲಿ 1,30,000 ಕಾನ್‌ಸ್ಟೆಬಲ್ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದು, ಈ ಕುರಿತು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದೆ.
ಇದನ್ನು ಓದಿ: ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿ, ದೇಶದಾತ್ಯಂತ ಹೊಸ ನಿಯಮ ಜಾರಿ!
ಹೌದು, CRPFನಲ್ಲಿ ಪುರುಷರಿಗೆ 1.25 ಲಕ್ಷ ಮತ್ತು ಮಹಿಳೆಯರಿಗೆ 4667 ಉದ್ಯೋಗಗಳಿವೆ. ಅಭ್ಯರ್ಥಿಗಳ ವಯಸ್ಸು 18ರಿಂದ 23 ವರ್ಷಗಳ ನಡುವೆ ಇರಬೇಕು. ಎಸ್‌ಸಿ ಮತ್ತು ಎಸ್‌ಟಿಗೆ ಐದು ವರ್ಷ ಮತ್ತು ಒಬಿಸಿಗಳಿಗೆ ಮೂರು ವರ್ಷಗಳ ವಯೋಮಿತಿ ವಿನಾಯಿತಿ ಇದೆ. ಅಗ್ನಿವೀರರಿಗೆ 10% ಉದ್ಯೋಗ ಮೀಸಲಿಡಲಾಗಿದ್ದು, ಇನ್ನು, ಅರ್ಜಿಗಳ ಸ್ವೀಕೃತಿಯ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ.
ಇದನ್ನು ಓದಿ: EPFOನಲ್ಲಿ 2859 ಹುದ್ದೆಗಳಿಗೆ ಬಂಪರ್ ನೇಮಕಾತಿ: ಪಿಯುಸಿ, ಪದವಿ ವಿದ್ಯಾರ್ಹತೆ, ಇಂದೇ ಅರ್ಜಿ ಸಲ್ಲಿಸಿ
ಸದ್ಯ CRPF (Central Reserve Police Force) ನಲ್ಲಿ 9,212 ಕಾನ್ಸ್‌ಟೇಬಲ್ (ತಾಂತ್ರಿಕ, ಟ್ರೇಡ್ಸ್‌ಮ್ಯಾನ್) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಏಪ್ರಿಲ್ 25 ಕೊನೆಯ ದಿನವಾಗಿದೆ. ಕರ್ನಾಟಕದ ಅಭ್ಯರ್ಥಿಗಳಿಗೆ ಹುದ್ದೆಗಳ ಸಂಖ್ಯೆ 460+6 ಮಹಿಳಾ ಹುದ್ದೆಗಳು ಇದ್ದು, ಹುದ್ದೆಗೆ ಅನುಗುಣವಾಗಿ 10ನೇ, ITI ಪಾಸ್, ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
ಹುದ್ದೆಗಳ ಹೆಚ್ಚಿನ ಮಾಹಿತಿಗಾಗಿ https://vijayaprabha.com/2023/03/27/9212-constable-posts-in-crpf-sslc-eligibility-apply-now/ ಮೇಲೆ ಕ್ಲಿಕ್ ಮಾಡಿ
ಇದನ್ನು ಓದಿ: SSCಯಿಂದ 7,500 ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಅಹ್ವಾನ, Degree ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ