ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಇಂದು ಮತ್ತೆ ಸ್ವಲ್ಪ ಮಟ್ಟಿನ ಇಳಿಕೆ ಕಂಡಿದ್ದು, ಕರ್ನಾಟಕದಲ್ಲಿ 24 ಕ್ಯಾರೆಟ್ 10 ಗ್ರಾಂ. ಚಿನ್ನದ ಬೆಲೆ 100 ರೂ ಇಳಿಕೆಯಾಗಿ 55,580(ನಿನ್ನೆ 55,680)ರೂ ಆಗಿದೆ.
ಹಾಗೆಯೇ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯೂ 100 ರೂ ಕಡಿಮೆಯಾಗಿದ್ದು, ರೂ.50,950(ನಿನ್ನೆ 51,050)ರೂ ಆಗಿದ್ದು, ಹಾಗೆಯೇ ಬೆಳ್ಳಿ ಬೆಲೆಯಲ್ಲಿ 100 ರೂ ಇಳಿಕೆ ಕಂಡಿದ್ದು, ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ರೂ.67,400(67,500)ರೂ. ಆಗಿದೆ.
ಕಡಿಮೆ ಬೆಲೆಗೆ ಚಿನ್ನ.. ಇಂದೇ ಕೊನೆ
2022-23ರ ಆರ್ಥಿಕ ವರ್ಷದ ಸಾವರಿನ್ ಗೋಲ್ಡ್ ಬಾಂಡ್ (Sovereign Gold Bond) 4ನೇ ಸರಣಿಯ ಹೂಡಿಕೆ ಮಾಡಲು ಇಂದು ಕೊನೆ ದಿನವಾಗಿದ್ದು, ಮಾ.6ರಂದು ಚಂದಾದಾರಿಕೆಗಾಗಿ ಬಾಂಡ್ ತೆರೆಯಲಾಗಿದೆ.
ಈ ಯೋಜನೆಯಂತೆ ಹೂಡಿಕೆದಾರರಿಗೆ ಚಿನ್ನವನ್ನು ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಖರೀದಿಸಲು ಅವಕಾಶವಿದ್ದು, Online, offline ಮೂಲಕ ಚಿನ್ನ ಖರೀದಿಸಬಹುದು. ಪ್ರತಿ ಗ್ರಾಂ ಚಿನ್ನಕ್ಕೆ ₹ 5,611 ಇದ್ದು, Online ಹೂಡಿಕೆ ಮೇಲೆ ಪ್ರತಿ ಗ್ರಾಂಗೆ ₹50 ಡಿಸ್ಕೌಟ್ ಇದೆ. ಅಂಚೆಕಚೇರಿ, ಮಾನ್ಯತೆ ಪಡೆದ ಸ್ಟಾಕ್‌ಎಕ್ಸ್‌ಚೇಂಜ್‌ಗಳಲ್ಲಿ ಇದು ಲಭ್ಯ.