ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರ ಖಾತೆಗೆ ಆರು ಸಾವಿರ ಬದಲಿಗೆ ಆರು ಲಕ್ಷ ರೂಪಾಯಿ ವರ್ಗಾವಣೆಯಾಗಿದ್ದು, ಬ್ಯಾಂಕ್ ಸಿಬ್ಬಂದಿಯ ಯಡವಟ್ಟಿನಿಂದ 50 ಜನ ಪಾಲಿಕೆ ಸದಸ್ಯರ ಅಕೌಂಟ್ಗಳಿಗೆ ಪಾಲಿಕೆಯ ಮೂರು ಕೋಟಿ ಹಣ ಸಂದಾಯವಾಗಿದೆ.
ಈಗೆ ಮೇ.28 ರಂದು ತಮ್ಮ ಖಾತೆಗೆ 6 ಲಕ್ಷ ರೂಗಳ ಲಕ್ಷ ಲಕ್ಷ ಹಣ ಆಗಿದ್ದನ್ನು ನೋಡಿ ಪಾಲಿಕೆ ಸದಸ್ಯರು ಬಂದ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪರಿಶೀಲನೆ ಮಾಡಲಾದಗ, ಬ್ಯಾಂಕ್ ಸಿಬ್ಬಂದಿ ತಪ್ಪಿನಿಂದಾಗಿ ಈ ಯಡವಟ್ಟು ಆಗಿದೆ ಎಂದು ತಿಳಿದು, ಕೂಡಲೇ ಬ್ಯಾಂಕ್ ಸಿಬ್ಬಂದಿ ಕೆಲ ಅಕೌಂಟ್ಗಳನ್ನು ತಕ್ಷಣವೇ ಬ್ಲಾಕ್ ಮಾಡಿದ್ದು, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಅವರು ಹಣ ಡ್ರಾ ಮಾಡಿಕೊಂಡ ಸದಸ್ಯರಿಗೆ ಕರೆ ಮಾಡಿ ಹಣ ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.