Elephants Appeared: ಶಿರಸಿ ನಗರ ವ್ಯಾಪ್ತಿಯಲ್ಲಿ ತಡರಾತ್ರಿ ಆನೆ ಪ್ರತ್ಯಕ್ಷ!

ಶಿರಸಿ: ಇದೇ ಮೊದಲ ಬಾರಿಗೆ ಶಿರಸಿ ನಗರ ವ್ಯಾಪ್ತಿಯಲ್ಲಿ ಆನೆಗಳು ಕಾಣಿಸಿಕೊಂಡು ನಿವಾಸಿಗಳನ್ನು ಆತಂಕಕ್ಕೀಡುಮಾಡಿದ ಘಟನೆ ನಡೆದಿದೆ. ತಾಲ್ಲೂಕಿನ ಬನವಾಸಿ ರಸ್ತೆಯ ಪೆಡಂಬೈಲ್ ಸಮೀಪದ ತೋಟಗಾರಿಕಾ ಕಾಲೇಜು ಹಿಂಭಾಗದ ತವರುಮನೆ ತೋಟಕ್ಕೆ ಶನಿವಾರ ತಡರಾತ್ರಿ…

ಶಿರಸಿ: ಇದೇ ಮೊದಲ ಬಾರಿಗೆ ಶಿರಸಿ ನಗರ ವ್ಯಾಪ್ತಿಯಲ್ಲಿ ಆನೆಗಳು ಕಾಣಿಸಿಕೊಂಡು ನಿವಾಸಿಗಳನ್ನು ಆತಂಕಕ್ಕೀಡುಮಾಡಿದ ಘಟನೆ ನಡೆದಿದೆ. ತಾಲ್ಲೂಕಿನ ಬನವಾಸಿ ರಸ್ತೆಯ ಪೆಡಂಬೈಲ್ ಸಮೀಪದ ತೋಟಗಾರಿಕಾ ಕಾಲೇಜು ಹಿಂಭಾಗದ ತವರುಮನೆ ತೋಟಕ್ಕೆ ಶನಿವಾರ ತಡರಾತ್ರಿ ಆನೆ ಹಿಂಡು ಲಗ್ಗೆ ಇಟ್ಟಿದೆ.

ಆನೆಗಳ ಹಿಂಡು ಕಾಣಿಸಿಕೊಂಡ ಹಿನ್ನಲೆ ಡಿಎಫ್ಓ ಅಜ್ಜಯ್ಯ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು. ಆನೆಗಳು ನಗರದ ಸಮೀಪದಲ್ಲೇ ಕಾಣಿಸಿಕೊಂಡಿದ್ದು, ನಗರದೊಳಕ್ಕೆ ಪ್ರವೇಶಿಸುವ ಆತಂಕ ಎದುರಾಗಿತ್ತು‌. ಈ ಹಿನ್ನಲೆ ಆನೆಗಳನ್ನು ಬೇರೆಡೆಗೆ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.

ಆನೆಗಳ ಹಿಂಡನ್ನು ತೆರಕನಳ್ಳಿ ಮೂಲಕ ಉಂಚಳ್ಳಿ ಅರಣ್ಯದತ್ತ ಓಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಆನೆಗಳು ವಾಹನಗಳು ಸಂಚರಿಸುವ ರಸ್ತೆಗೆ ಸಮೀಪದಲ್ಲಿದ್ದಿದ್ದರಿಂದ ಮುನ್ನೆಚ್ಚರಿಕೆ ದೃಷ್ಟಿಯಿಂದ ವಾಹನಗಳ ಓಡಾಟವನ್ನು ತಡೆಹಿಡಿಯಲಾಯಿತು. ಬಳಿಕ ಆನೆಗಳ ಹಿಂಡನ್ನು ಅರಣ್ಯದತ್ತ ಓಡಿಸುವ ಕಾರ್ಯಾಚರಣೆ ಕೈಗೊಳ್ಳಲಾಯಿತು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.