ಬೆಂಗಳೂರು: ಕುರುಬ ಸಮುದಾಯವನ್ನು ಎಸ್ ಟಿ ಮೀಸಲಾತಿಗೆ ಸೇರಿಸುವಂತೆ ಆಗ್ರಹಿಸಿ ರಾಜ್ಯದ ವಿವಿದೆಡೆ ಎಸ್.ಟಿ.ಹೋರಾಟ ಸಮಿತಿಯಿಂದ ಬೃಹತ್ ಜಾಗೃತಿ ಸಮಾವೇಶಗಳು ನಡೆಯುತ್ತಿವೆ. ಕುರುಬ ಸಮುದಾಯವನ್ನು ಎಸ್ ಟಿ ಮೀಸಲಾತಿ ಹೋರಾಟದ ನೇತೃತ್ವವನ್ನು ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ವಹಿಸಿಕೊಂಡು ಹೋರಾಟದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಈಗಾಗಲೇ ಕುರುಬ ಸಮುದಾಯದ ಎಸ್ ಟಿ ಮೀಸಲಾತಿ ಹೋರಾಟಕ್ಕೆ ಸಚಿವ ಕೆ ಎಸ್ ಈಶ್ವರಪ್ಪ, ಎಂಟಿಬಿ ನಾಗರಾಜ್, ಆರ್ ಶಂಕರ್, ರೇವಣ್ಣ ಸೇರಿದಂತೆ ಕುರುಬ ಸಮಾಜದ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಎಸ್ ಟಿ ಮೀಸಲಾತಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಈ ಕುರಿತು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದೂ, ಕುರುಬರನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಮುಖ್ಯಮಂತ್ರಿ ಅವರು ತಕ್ಷಣ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ರಾಜ್ಯದ ಮನವಿಯನ್ನು ಪುರಸ್ಕರಿಸದಿದ್ದರೆ ನಾನೇ ಮೊದಲು ಬೀದಿಗಿಳಿದು ಹೋರಾಟ ಆರಂಭಿಸುತ್ತೇನೆ ಎಂದು ಬೆಂಬಲ ಸೂಚಿಸಿದ್ದಾರೆ.
ಇನ್ನು ಶ್ರ ನಿರಂಜನಾನಂದ ಪುರಿ ಶ್ರೀಗಳ ನೇತೃತ್ವದಲ್ಲಿ ಜನವರಿ 15 ರಂದು ಪಾದಯಾತ್ರೆ ನಡೆಯಲಿದ್ದು, ಫೆಬ್ರುವರಿ 7 ರಂದು ಬೆಂಗಳೂರಿನಲ್ಲಿ ಕುರುಬ ಸಮುದಾಯದ ಬೃಹತ್ ಸಮಾವೇಶ ನಡೆಯಲಿದೆ ಎಂದು ಕುರುಬ ಸಮುದಾಯದವರಿಗೂ ಕರೆ ನೀಡಿದ್ದಾರೆ.
ಕುರುಬರನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. @CMofKarnataka ಅವರು ತಕ್ಷಣ ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ರಾಜ್ಯದ ಮನವಿಯನ್ನು ಪುರಸ್ಕರಿಸದಿದ್ದರೆ ನಾನೇ ಮೊದಲು ಬೀದಿಗಿಳಿದು ಹೋರಾಟ ಆರಂಭಿಸುತ್ತೇನೆ. pic.twitter.com/ZfkZTVGik4
— Siddaramaiah (@siddaramaiah) January 13, 2021
ಇದನ್ನು ಓದಿ: ಕುರುಬರ ಎಸ್ ಟಿ ಮೀಸಲಾತಿ ರಣಕಹಳೆ; ಸಮುದಾಯದ ಮೇಲಿನ ದಬ್ಬಾಳಿಕೆ, ದೌರ್ಜನ್ಯ ತಪ್ಪಿಸಲು ಹೋರಾಟ: ಶ್ರೀ ನಿರಂಜನಾನಂದ ಪುರಿ
ಇದನ್ನು ಓದಿ: ಕುರುಬ ಸಮುದಾಯದ ಎಸ್‍ಟಿ ಮೀಸಲಾತಿ ಹೋರಾಟಕ್ಕೆ ಸಿದ್ದರಾಮಯ್ಯ ವಿರೋಧವಿಲ್ಲ; ಸಚಿವ ಈಶ್ವರಪ್ಪ
ಇದನ್ನು ಓದಿ: ಮಕರ ಸಂಕ್ರಾಂತಿ ದಿನದಂದು ಕುರುಬರ ದಿಕ್ಕು ಬದಲಾಗಲಿದೆ: ನಿರಂಜನಾನಂದಪುರಿ ಶ್ರೀ




