ದಾವಣಗೆರಿಯಲ್ಲಿ ನಡೆಯುವುದು ಸಿದ್ದರಾಮೋತ್ಸವ ಅಲ್ಲ. ನನಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಸ್ನೇಹಿತರು, ಹಿತೈಷಿಗಳು ಸೇರಿ ಅಮೃತೋತ್ಸವ ಆಚರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು, ಜೀವನದಲ್ಲಿ ಇದೊಂದು ಮಹತ್ತರ ಮೈಲಿಗಲ್ಲು. ಶಕ್ತಿ ಪ್ರದರ್ಶನ, ಮುಖ್ಯಮಂತ್ರಿಯಾಗಲು ಹೀಗೆ ಮಾಡುತ್ತಿದ್ದಾರೆ ಎನ್ನುವುದೆಲ್ಲ ಮಾಧ್ಯಮ ಸೃಷ್ಟಿಯಾಗಿದೆ. ನಮ್ಮಲ್ಲಿ ಯಾವ ಬಣವೂ ಇಲ್ಲ, ಇರುವುದೊಂದೇ ಬಣ್ಣ, ಅದು ಸೋನಿಯಾ ಗಾಂಧಿ ಬಣ ಎಂದು ಸಿದ್ದರಾಮಯ್ಯ ಮಾಧ್ಯಮದವರಿಗೆ ಹೇಳಿದರು.
ಸಿದ್ದರಾಮೋತ್ಸವ-@75; ರಾರಾಜಿಸುತ್ತಿವೆ ಕಟೌಟ್‌ಗಳು..!
ಇನ್ನು, ಮಾಜಿ ಸಿಎಂ ಹಾಗೂ ಹಾಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬದ ನಿಮಿತ್ಯ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಹಮ್ಮಿಕೊಂಡಿದ್ದ ‘ಸಿದ್ದರಾಮೋತ್ಸವ@75’ ಕಾರ್ಯಕ್ರಮವು ಅದ್ದೂರಿಯಾಗಿ ಆಯೋಜನೆ ಮಾಡಲಾಗಿದ್ದು, ಇಂದು ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.
ಇನ್ನು, ದಾವಣಗೆರೆ ನಗರದ ತುಂಬೆಲ್ಲ ಸಿದ್ದರಾಮಯ್ಯನವರ ಕಟೌಟ್‌ಗಳೇ ನಿಂತಿದ್ದು, ಕಾರ್ಯಕ್ರಮದ ಸ್ಥಳದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಸಿದ್ದು, ರಾಹುಲ್ ಗಾಂಧಿ ಅವರ ಕಟೌಟ್‌ಗಳು ರಾರಾಜಿಸುತ್ತಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಿಂದ ಅಭಿಮಾನಿಗಳು ಬರುತ್ತಿದ್ದಾರೆ.