ಬೆಂಗಳೂರು: ಮೀಸಲಾತಿ ಬಗ್ಗೆ ಮಾತನಾಡಬೇಕಾದವರೇ ಮಾತನಾಡುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಇಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮಂಡಲ್ ವರದಿಯನ್ನು ವಿರೋಧಿಸಿದವರು ಇಂದು ಸುಮ್ಮನಿದ್ದಾರೆ. ಈ ಬಗ್ಗೆ ಮಾತನಾಡಲು ನಮಗೂ ಕಷ್ಟವೇ. ನಾನು ಮಾತನಾಡಿದರೆ, ಸಿದ್ದರಾಮಯ್ಯ ಜನರ ದಾರಿ ತಪ್ಪಿಸಿದ ಎನ್ನುತ್ತಾರೆ. ಬಸವಣ್ಣನವರ ವಿಚಾರಧಾರೆಗಳು ಇಂದು ಪ್ರಸ್ತುತ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಇನ್ನು, ಪಂಚಮಸಾಲಿ ಲಿಂಗಾಯತರು 2ಎ ಹಾಗೂ ಕುರುಬ ಜನಾಂಗದವರು ಎಸ್ಟಿ ಮೀಸಲಾತಿಗಾಗಿ ಹೋರಾಡುತ್ತಿದ್ದಾರೆ.
ಬಿಜೆಪಿ ಸರ್ಕಾರ ಬಂದು ಎಲ್ಲವೂ ಹಾಳಾಗಿದೆ: ಸಿದ್ದರಾಮಯ್ಯ
ಕಳೆದ 7 ವರ್ಷಗಳಲ್ಲಿ ಪ್ರಧಾನಿ ಮೋದಿ ಏನು ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಕಿಡಿಕಾರಿದ್ದು, ದೇಶದ ಆರ್ಥಿಕ ಸ್ಥಿತಿ ಏನಾಗಿದೆ, ಜಿಡಿಪಿ ಹೇಗಿದೆ? ಬಡತನರೇಖೆಯಲ್ಲಿದ್ದವರು ಮೇಲೆ ಬಂದಿದ್ದಾರಾ? ಲೀಟರ್ ಪೆಟ್ರೋಲ್ 105 ರೂ., ಲೀಟರ್ ಡೀಸಲ್ 95 ರೂ. ಆಗಿದೆ ಎಂದು ಕಿಡಿಕಾರಿದ್ದಾರೆ.
ಇನ್ನು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂಧನ ಬೆಲೆ ಏರಿಕೆಗೆ ರಾಜ್ಯ ಸರ್ಕಾರಗಳು ಹೇರುತ್ತಿರುವ ಸೆಸ್ ಕಾರಣ ಎಂದಿದ್ದಾರೆ. ಅವರಿಗೆ ಸೆಸ್ ಬಗ್ಗೆ ಗೊತ್ತಿದೆಯೇ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.