ಪೆರು: ಜೂಮ್ ಸಭೆಯಲ್ಲಿ ಆನ್ಲೈನ್ ನ್ಯಾಯಾಲಯದ ವಿಚಾರಣೆಗಳು ನಡೆಯುತ್ತಿರುವಾಗ, ವಕೀಲರೊಬ್ಬರು ಕೊಠಡಿಯಲ್ಲಿ ಯುವತಿಯೊಂದಿಗೆ (ಕ್ಲೈಂಟ್) ಸರಸವಾಡಿ ನ್ಯಾಯಾಧೀಶರಿಗೆ ಶಾಕ್ ನೀಡಿದ್ದಾನೆ.
ಕರೋನಾ ವೈರಸ್ನಿಂದಾಗಿ ಎಲ್ಲಾ ನ್ಯಾಯಾಲಯಗಳು ಆನ್ಲೈನ್ನಲ್ಲಿ ನಡೆಯುತ್ತಿವೆ. ನ್ಯಾಯಾಧೀಶರು ಜೂಮ್ ಯ್ಯಾಪ್ ಮೂಲಕ ವಿಚಾರಣೆಯನ್ನು ಮುಂದುವರೆಸುತ್ತಿದ್ದಾರೆ. ಇದರೊಂದಿಗೆ, ಎಲ್ಲಾ ವಕೀಲರು ತಮ್ಮ ಮನೆಗಳಿಂದ ತಮ್ಮ ವಾದಗಳನ್ನು ಮಂಡಿಸುತ್ತಿದ್ದಾರೆ. ಆದರೆ, ಒಬ್ಬ ಲಾಯರ್ ಮಾತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ ಸಂದರ್ಭದಲ್ಲಿ ಯುವತಿಯೊಂದಿಗೆ ರೋಮ್ಯಾನ್ಸ್ ನಲ್ಲಿ ಮುಳುಗಿ ತೇಲಿದ್ದಾನೆ. ಅವರು ಮೈಮೇಲಿನ ಬಟ್ಟೆಗಳನ್ನು ಬಿಚ್ಚಿ ಕ್ಯಾಮೆರಾದ ಮುಂದೆ ಆ ಕೆಲಸ ಮಾಡಿ ನ್ಯಾಯಾಧೀಶರಿಗೆ ಶಾಕ್ ನೀಡಿದ್ದಾನೆ.
ಈ ಆಘಾತಕಾರಿ ಘಟನೆ ಪೆರುವಿನಲ್ಲಿ ನಡೆದಿದೆ. ಪೆರೇಡ್ಸ್ ರೋಬಲ್ಸ್ನ ವಕೀಲ ಹೆಕ್ಟರ್ ಸಿಪ್ರಿಯಾನೊ ಅವರು ಜೂಮ್ ಸಭೆಯಲ್ಲಿ ಒಂದು ಪ್ರಕರಣದ ಬಗ್ಗೆ ವಾದಗಳನ್ನು ಮಂಡಿಸುತ್ತಿದ್ದರು. ಆ ನಂತರ ಬಟ್ಟೆಗಳನ್ನು ಬಿಚ್ಚಿ ಯುವತಿಯೊಂದಿಗೆ ಶೃಂಗಾರದಲ್ಲಿ ತೊಡಗಿದ್ದಾನೆ. ಜೂಮ್ ಸಭೆಯಲ್ಲಿ ಇದ್ದ ಎಲ್ಲರೂ ಅವರು ಮಾಡಿದ ಕೆಲಸವನ್ನು ನೋಡಿದ್ದಾರೆ. ನ್ಯಾಯಾಧೀಶ ಜಾನ್ ಚಚುವಾ ಟೊರೆಸ್ ಕೂಡ ನೋಡಿ ಶಾಕ್ ಆಗಿದ್ದಾರೆ. ನ್ಯಾಯಾಧೀಶರು ತಕ್ಷಣವೇ ವಿಚಾರಣೆಯನ್ನು ನಿಲ್ಲಿಸುವಂತೆ ಆದೇಶಿಸಿದ್ದಾರೆ. ಕೂಡಲೇ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಅದೆಲ್ಲ ಜೂಮ್ ಸಭೆಯಲ್ಲಿ ರೆಕಾರ್ಡ್ ಕಾರಣ, ಅಲ್ಲಿದ್ದ ಕೆಲವರು ಅದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಘಟನೆಯಿಂದ ನ್ಯಾಯಾಧೀಶ ಟೊರೆಸ್ ಆಕ್ರೋಶ ವ್ಯಕ್ತಪಡಿಸಿದ್ದು , ರಾಜ್ಯ ಪ್ರಾಸಿಕ್ಯೂಷನ್ ಸೇವೆ ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕು. ಅವರು ಇನ್ನು ಮುಂದೆ ಯಾವುದೇ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗಿಯಾಗಬಾರದು. ” ಅವರ ಪ್ರಕರಣಗಳನ್ನು ಕರ್ತವ್ಯ ವಕೀಲರಿಗೆ ಹಸ್ತಾಂತರಿಸಬೇಕು ಎಂದರು.
ರೋಬಲ್ಸ್ ಸ್ಟೇಟ್ ಸರ್ವಿಸ್ ಸ್ಥಳೀಯ ಬಾರ್ ಅಸೋಸಿಯೇಶನ್ನಿಂದ ಕೂಡ ತನಿಖೆಗೆ ಒಳಗಾಗಿದ್ದಾರೆ. ಸ್ಥಳೀಯ ಮಾಧ್ಯಮವೊಂದರ ವರದಿಯ ಪ್ರಕಾರ, ವಕೀಲರೊಂದಿಗೆ ಪ್ರಣಯದಲ್ಲಿ ತೊಡಗಿದ್ದ ಯುವತಿ ಗ್ರಾಹಕ(ಕ್ಲೈಂಟ್ ). ಈ ವಿಡಿಯೋ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.