ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದ ಶಿಖರ್ ದವನ್!

ದುಬೈ : ಐಪಿಎಲ್ 2020ರಲ್ಲಿ ಸದ್ಯ ಉತ್ತಮ ಫಾರ್ಮ್ ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಶಿಖರ್ ಧವನ್ ಎರಡು ಹೊಸ ದಾಖಲೆ ಬರೆದಿದ್ದಾರೆ. ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಶತಕ…

ದುಬೈ : ಐಪಿಎಲ್ 2020ರಲ್ಲಿ ಸದ್ಯ ಉತ್ತಮ ಫಾರ್ಮ್ ನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಶಿಖರ್ ಧವನ್ ಎರಡು ಹೊಸ ದಾಖಲೆ ಬರೆದಿದ್ದಾರೆ.

ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಶತಕ ಸಿಡಿಸುವ ಮೂಲಕ ಸತತ 2 ಪಂದ್ಯಗಳಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಶಿಖರ್ ಧವನ್ ಪಾತ್ರರಾಗಿದ್ದು, 5000 ಗಳಿಸಿದ 5 ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈಗಾಗಲೇ 2 ಅರ್ಧಶತಕ & 2 ಶತಕ ಗಳಿಸುವ ಮೂಲಕ ಈ ಸೀಸನ್ ನಲ್ಲಿ 300ಕ್ಕೂ ಹೆಚ್ಚು ರನ್ ಕಲೆ ಹಾಕಿರುವ ಧವನ್, ಒಟ್ಟಾರೆಯಾಗಿ ಇಲ್ಲಿಯವರೆಗೂ ಐಪಿಎಲ್ ನಲ್ಲಿ 169 ಪಂದ್ಯಗಳನ್ನು ಆಡಿದ್ದು 5043 ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 39 ಅರ್ಧ ಶತಕಗಳನ್ನು ಗಳುಸಿದ್ದು, 106 ರನ್ ವೈಯಕ್ತಿಕ ಗರಿಷ್ಟ ರನ್ ಗಳಿಸಿದ್ದಾರೆ.

Vijayaprabha Mobile App free

ಐಪಿಎಲ್ ನಲ್ಲಿ 5000 ರನ್ ಗಡಿ ದಾಟಿದವರಲ್ಲಿ ಧವನ್ 5ನೇ ಆಟಗಾರನಾಗಿದ್ದಾರೆ. ಇದಕ್ಕೂ ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 5759 ರನ್ ಗಳಿಸಿ ಮೊದಲ ಸ್ಥಾನದಲ್ಲಿ ಇದ್ದಾರೆ. ನಂತರದ ಸ್ಥಾನದಲ್ಲಿ ಸುರೇಶ್ ರೈನಾ 5368 ರನ್, ರೋಹಿತ್ ಶರ್ಮಾ 5158 ರನ್, ಡೇವಿಡ್ ವಾರ್ನರ್ 5037 ರನ್ ಗಳಿಸಿದ್ದು, ನಂತರದ ಸ್ಥಾನದಲ್ಲಿ ಶಿಖರ್ ಧವನ್ 5043 ರನ್ ಗಳಿಸಿದ್ದಾರೆ.

ಈ ಸಾಧನೆ ಮಾಡಿದ 4ನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಧವನ್ ಪಾತ್ರರಾಗಿದ್ದಾರೆ.

ಇದನ್ನು ಓದಿ: ಧವನ್ ಶತಕ ವ್ಯರ್ಥ; ಡೆಲ್ಲಿ ವಿರುದ್ಧ ಪಂಜಾಬ್ ತಂಡಕ್ಕೆ 5 ವಿಕೆಟ್ ಗಳ ಭರ್ಜರಿ ಜಯ

ಇದನ್ನು ಓದಿ: ಮದುವೆಯಾಗಿ ಮೂರೇ ತಿಂಗಳಿಗೆ ತನ್ನ ಮೂರನೇ ಗಂಡನನ್ನು ಮನೆಯಿಂದ ಹೊರ ಹಾಕಿದ ಖ್ಯಾತ ನಟಿ..?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.