ಆರ್‌ಎಸ್ಎಸ್ ಹಿರಿಯ ನಾಯಕ ವಸಂತ ರಾವ್
ರಾಮಚಂದ್ರ ಟಂಕಸಾಲಿ ವಯೋಸಹಜ ಖಾಯಿಲೆ ಇಂದ ಬಳಲುತ್ತಿದ್ದ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಅವರಿಗೆ 92 ವರ್ಷ ವಯಸ್ಸಾಗಿತ್ತು. ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಆಡ್ವಾಣಿ, ಜಗನ್ನಾಥ ರಾವ್ ಜೋಶಿಯವರಂತಹ ಸಂಘದ ಹಿರಿಯರೊಂದಿಗೆ ಟಂಕಸಾಲಿ ನಿಕಟ ಸಂಪರ್ಕ ಹೊಂದಿದ್ದರು.
ಸಂಘವೇ ಕುಟುಂಬ ಎಂದು ಭಾವಿಸಿದ್ದವರಲ್ಲಿ ವಸಂತ ರಾವ್ ರಾಮಚಂದ್ರ ಟಂಕಸಾಲಿ ಸಹ ಒಬ್ಬರಾಗಿದ್ದರು.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.