ಬ್ರೇಕಿಂಗ್ ನ್ಯೂಸ್: ಬಿಜೆಪಿ ಹಿರಿಯ ನಾಯಕ, ಶಾಸಕ ಕೆ.ಜಿ.ಶಂಕರ್ ವಿಧಿವಶ

ಪುದುಚೇರಿ: ಬಿಜೆಪಿ ಹಿರಿಯ ನಾಯಕ ಹಾಗು ಪುದುಚೇರಿ ಶಾಸಕ ಕೆ.ಜಿ. ಶಂಕರ್(70) ಅವರು ಹೃದಯಾಘಾತದಿಂದಾಗಿ ಭಾನುವಾರ ನಿಧನ ಹೊಂದಿದ್ದಾರೆ. ಇಂದು ಬೆಳಗ್ಗೆ ಎದೆ ನೋವು ಕಾಣಿಸಿಕೊಂಡ ಸ್ವಲ್ಪ ಹೊತ್ತಿನ ಬಳಿಕ ಅವರು ಕೊನೆಯುಸಿರೆಳೆದಿದ್ದಾರೆ ಎಂದು…

KG Shankar vijayaprabha

ಪುದುಚೇರಿ: ಬಿಜೆಪಿ ಹಿರಿಯ ನಾಯಕ ಹಾಗು ಪುದುಚೇರಿ ಶಾಸಕ ಕೆ.ಜಿ. ಶಂಕರ್(70) ಅವರು ಹೃದಯಾಘಾತದಿಂದಾಗಿ ಭಾನುವಾರ ನಿಧನ ಹೊಂದಿದ್ದಾರೆ. ಇಂದು ಬೆಳಗ್ಗೆ ಎದೆ ನೋವು ಕಾಣಿಸಿಕೊಂಡ ಸ್ವಲ್ಪ ಹೊತ್ತಿನ ಬಳಿಕ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಪುದುಚೇರಿ ಬಿಜೆಪಿ ಘಟಕದ ಖಜಾಂಚಿಯಾಗಿದ್ದ ಅವರು 2017ರಲ್ಲಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗೆ ನಾಮನಿರ್ದೇಶನಗೊಂಡಿದ್ದರು.

ಪುದುಚೇರಿ ಶಾಸಕ, ಬಿಜೆಪಿ ಘಟಕದ ಖಜಾಂಚಿ ಕೆ.ಜಿ. ಶಂಕರ್ ಶಾಸಕರ ಅವರ ನಿಧನಕ್ಕೆ ಲೆ.‌ಗರ್ವನರ್‌ ಕಿರಣ್‌ ಬೇಡಿ, ಸಿಎಂ ನಾರಾಯಣಸ್ವಾಮಿ, ಸ್ಪೀಕರ್ ಶಿವಕೋಲುಂಧು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.