PUC results : 2025ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇನ್ನೇನು ಕೆಲವೇ ನಿಮಿಷಗಳಲ್ಲಿ ಪ್ರಕಟವಾಗಲಿದ್ದು, ಬೆಳಗ್ಗೆ 12:30ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸಲಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮಾ.1ರಿಂದ ಮಾ.20ರ ವರೆಗೆ ನಡೆಸಲಾಗಿತ್ತು. ವಿದ್ಯಾರ್ಥಿಗಳು ಮಧ್ಯಾಹ್ನ 1:30ರ ನಂತರ https://karresults.nic.in ಫಲಿತಾಂಶ ವೀಕ್ಷಿಸಬಹುದಾಗಿದೆ.
ಆನ್ಲೈನ್ನಲ್ಲಿ ಫಲಿತಾಂಶ ನೋಡಲು ಹೀಗೆ ಮಾಡಿ
ದ್ವಿತೀಯ ಪಿಯುಸಿ ಫಲಿತಾಂಶ ಮಧ್ಯಾಹ್ನ 1:30ರ ವೇಳೆಗೆ ಆನ್ಲೈನ್ನಲ್ಲಿ ಪ್ರಕಟವಾಗಲಿದೆ. ನಂತರ ಶಿಕ್ಷಣ ಇಲಾಖೆ ವೆಬ್ಸೈಟ್ ಮೂಲಕ ಅಂಕಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಅಧಿಕೃತ ವೆಬ್‌ಸೈಟ್‌ಗೆ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಬೇಕು. ಹೋಂ ಪೇಜ್ನಲ್ಲಿ, Second PU Results 2025 ಲಿಂಕ್ ಕ್ಲಿಕ್ ಮಾಡಿ. ರಿಜಿಸ್ಟ್ರೇಷನ್ ನಂಬರ್ (ನೋಂದಣಿ ಸಂಖ್ಯೆ) ಮತ್ತು ಪಾಸ್‌ವರ್ಡ್ ನಮೂದಿಸಬೇಕು. Second PU Results 2025 ಎಂಬುದು ಸ್ಕ್ರೀನ್ನಲ್ಲಿ ಕಾಣಿಸುತ್ತದೆ.