ಟಾಪ್ ಹೀರೋ ಚಿತ್ರದಲ್ಲಿ ಹೀರೋಯಿನ್ ಚಾನ್ಸ್ ಎಂದು ಹೇಳಿ; ಮೂರು ದಿನಗಳ ಕಾಲ ಲಾಡ್ಜ್‌ನಲ್ಲಿ ಲೈಂಗಿಕ ದೌರ್ಜನ್ಯ

ಹೈದರಾಬಾದ್: ಈಗೆ ತಮಿಳಿನ ಖ್ಯಾತ ಹೀರೊ ವಿಶಾಲ್ ಸಿನಿಮಾದಲ್ಲಿ, ನಾಯಕಿಯಾಗಿ ನಟಿಸಲು ಅವಕಾಶ ಪಡೆಯಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಒಬ್ಬ ವಿದ್ಯಾರ್ಥಿ ಮೋಸ ಹೋಗಿದ್ದು, ಚೆನ್ನೈ ಮತ್ತು ವಿಶಾಖಪಟ್ಟಣಂನಲ್ಲಿ ಮೂರು ದಿನಗಳ ಕಾಲ ಲಾಡ್ಜ್‌ನಲ್ಲಿ ಲೈಂಗಿಕ…

Harassment vijayaprabha news

ಹೈದರಾಬಾದ್: ಈಗೆ ತಮಿಳಿನ ಖ್ಯಾತ ಹೀರೊ ವಿಶಾಲ್ ಸಿನಿಮಾದಲ್ಲಿ, ನಾಯಕಿಯಾಗಿ ನಟಿಸಲು ಅವಕಾಶ ಪಡೆಯಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಒಬ್ಬ ವಿದ್ಯಾರ್ಥಿ ಮೋಸ ಹೋಗಿದ್ದು, ಚೆನ್ನೈ ಮತ್ತು ವಿಶಾಖಪಟ್ಟಣಂನಲ್ಲಿ ಮೂರು ದಿನಗಳ ಕಾಲ ಲಾಡ್ಜ್‌ನಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಘಟನೆ ನಡೆದಿದೆ.

ವಿಶಾಖಪಟ್ಟಣಂನ ಆ ಯುವತಿ ಹೈದರಾಬಾದ್‌ನಲ್ಲಿ ಓದುತ್ತಿರುತ್ತಾಳೆ. ಸಿನಿಮಾದಲ್ಲಿ ನಟಿಸಬೇಕೆಂಬುದು ಆ ಯುವತಿಯ ಆಸೆ. ತಮಿಳು ನಟ ವಿಶಾಲ್ ಎದುರು ಹೀರೋಯಿನ್ ಚಾನ್ಸ್ ಎಂಬ ಆನ್‌ಲೈನ್ ಜಾಹೀರಾತನ್ನು ನೋಡಿದ ಆ ಯುವತಿ ಒಬ್ಬ ವ್ಯಕ್ತಿಯನ್ನು ಸಂಪರ್ಕಿಸಿದ್ದಾಳೆ. ಆ ವ್ಯಕ್ತಿ ಕೇಳಿದಂತೆಯೇ ಆ ಯುವತಿ ತನ್ನ ಪ್ರೊಫೈಲ್ ಮತ್ತು ಫೋಟೋಗಳನ್ನು ಕಳುಹಿಸಿದ್ದಾಳೆ.

ಆ ಫೋಟೋಗಳನ್ನು ನೋಡಿದ ಆ ವ್ಯಕ್ತಿ ನಿಮ್ಮನ್ನು ಸಿನಿಮಾದಲ್ಲಿ ಆಯ್ಕೆ ಮಾಡಲಾಗಿದೆ ಎಂದು ನಕಲಿ ಅಗ್ರಿಮೆಂಟ್ ಕಳುಹಿಸಿದ್ದಾನೆ. ಚೆನ್ನೈಗೆ ಬಂದು ವಿಶಾಲ್ ಅವರ ವ್ಯವಸ್ಥಾಪಕರನ್ನು ಹೋಟೆಲ್‌ನಲ್ಲಿ ಭೇಟಿಯಾಗಲು ಹೇಳಿದ್ದಾನೆ. ಆದರೆ ಚೆನ್ನೈ ಹೋಟೆಲ್‌ವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ರಾತ್ರಿಯೆಲ್ಲಾ ಅವನೊಂದಿಗೆ ಕಳೆಯಬೇಕಾಯಿತು.

Vijayaprabha Mobile App free

ಆಗ ಆ ವ್ಯಕ್ತಿ ವೈಜಾಗ್‌ಗೆ ಹೋಗಿ ಕಾಸ್ಟ್ಯೂಮ್ ಡಿಸೈನರ್‌ನನ್ನು ಭೇಟಿ ಮಾಡಲು ಹೇಳಿದ್ದಾನೆ. ಆ ವ್ಯಕ್ತಿಯ ಮಾತಿನ ಪ್ರಕಾರ, ವಿಶಾಖಪಟ್ಟಣಂಗೆ ಹೋದ ಆ ಯುವತಿ ‘ಕಾಸ್ಟ್ಯೂಮ್ ಡಿಸೈನರ್’ ಜೊತೆ ಆ ರಾತ್ರಿ ಕೂಡ ಕಳೆಯಬೇಕಾಯಿತು. ಉದ್ಯಮದಲ್ಲಿ ಇವೆಲ್ಲವೂ ಸಹಜ ಎಂದು ತಿಳಿದುಕೊಂಡ ಆ ಯುವತಿ, ವೈಜಾಗ್‌ನಲ್ಲಿ ಇರು ಬೇರೊಬ್ಬರು ಬರುತ್ತಾರೆ ಎಂದು ಆ ವ್ಯಕ್ತಿ ಹೇಳುವ ಮೂಲಕ, ಹಾಗೆಯೇ ಮತ್ತೊಬ್ಬರಿಂದ ಮೋಸ ಘಟನೆ ನಡೆದಿದೆ.

ಹೀಗೆ ತನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆ ಯುವತಿ ಅನುಮಾನಗೊಂಡು ಹೈದರಾಬಾದ್ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಪೊಲೀಸರು ಆ ವ್ಯಕ್ತಿಯನ್ನು ಬಂದಿಸುತ್ತಿದಂತೆ ಆ ಯುವತಿ ನಿಟ್ಟುಸಿರು ಬಿಟ್ಟಿದ್ದಾಳೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.