‘ಸ್ವಾತಂತ್ರ್ಯ ಹೋರಾಟದಲ್ಲಿ RSS ಭಾಗಿಯಾಗಿಲ್ಲ’ ಎಂದು ಮತ್ತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಭಾಗವಹಿಸಿರಲಿಲ್ಲ. ಬದಲಿಗೆ ಬ್ರಿಟಿಷರೊಂದಿಗೆ ನಿಂತಿತ್ತು. ಅಲ್ಲದೇ, 2002ರ ತನಕ ತನ್ನ ಮುಖ್ಯ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನೂ ಹಾರಿಸಿರಲಿಲ್ಲ ಎಂದು ಹೇಳಿದ್ದಾರೆ.
ಹೀಗಾಗಿ, ಬಿಜೆಪಿಗೆ ಎಂದಿಗೂ ಸೈನಿಕರ ರಾಷ್ಟ್ರಭಕ್ತಿ ಅರ್ಥವಾಗುವುದಿಲ್ಲ. ಸೇನೆಯನ್ನು ಗುತ್ತಿಗೆ ಕೆಲಸವನ್ನಾಗಿ ಬದಲಾಯಿಸುವ ಪ್ರಯತ್ನವನ್ನು ಬಿಜೆಪಿ ಕೈ ಬಿಡಬೇಕು ಎಂದು ಮಲ್ಲಿಕಾರ್ಜುನ ಖರ್ಗ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
RSS didn’t
– participate in freedom struggle instead sided with British
– unfurl the tricolor on their HQ till 2002So, BJP won’t understand the nationalistic sentiment of being a soldier for life. They must stop trying to change the Army into Contract job.#AgnipathWapasLo
— Mallikarjun Kharge (@kharge) June 23, 2022