Jan Dhan Yojana: ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (Pradhan Mantri Jan Dhan Yojana) ಮೂಲಕ ದೇಶದಲ್ಲಿ 47 ಕೋಟಿಗೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದ್ದು, ಈ ಖಾತೆಗಳ ಮೂಲಕ ದೊರೆಯುವ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಜನ್ ಧನ್ ಗ್ರಾಹಕರಿಗೆ ಸರಕಾರ 10 ಸಾವಿರ ರೂ ನೀಡುತ್ತದೆ.
ಇದಕ್ಕಾಗಿ ನೀವು ನಿಮ್ಮ ಶಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಇದಲ್ಲದೇ, ಈ ಖಾತೆಯಲ್ಲಿ ರೂ 1 ಲಕ್ಷದ 30,000 ವರೆಗಿನ ವಿಮೆಯ ಲಭ್ಯತೆಯಂತಹ ಇತರ ಪ್ರಯೋಜನಗಳಿವೆ. ಇವುಗಳ ಬಗ್ಗೆ ನಿಮಗೆ ತಿಳಿದಿಲ್ಲದಿದ್ದರೆ ಈಗಲೇ ತಿಳಿಯಿರಿ.
ಇದನ್ನು ಓದಿ: SBI ನ ಹೊಸ ಯೋಜನೆ ಮತ್ತೆ ಬಂದಿದೆ; ಗ್ರಾಹಕರಿಗೆ ಹೆಚ್ಚು ಲಾಭ, ಕೊನೆಯ ದಿನಾಂಕ ಯಾವಾಗ? ಇಲ್ಲಿದೆ ನೋಡಿ
ಶೂನ್ಯ ರೂಗಳಲ್ಲಿ ಖಾತೆ, 10,000 ಓವರ್‌ಡ್ರಾಫ್ಟ್:
ಜನ್ ಧನ್ ಖಾತೆಯ ಅಡಿಯಲ್ಲಿ ಗ್ರಾಹಕರಿಗೆ ವಿವಿಧ ಪ್ರಯೋಜನಗಳನ್ನು ನೀಡಲಾಗುತ್ತದೆ. ಮೊದಲ ಅನುಕೂಲವೆಂದರೆ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ (Minimum balance) ಕಾಯ್ದುಕೊಳ್ಳುವ ಅಗತ್ಯವಿಲ್ಲ.
ಹೆಚ್ಚುವರಿಯಾಗಿ.. ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಈ ಖಾತೆಯಲ್ಲಿ ನೀವು ಬಯಸಿದರೆ ರೂ.10,000 ಓವರ್‌ಡ್ರಾಫ್ಟ್‌ಗಾಗಿ (Overdraft) ಬ್ಯಾಂಕ್‌ಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬೇಕು.
ಇದನ್ನು ಓದಿ: VIMUL ನಲ್ಲಿ ವಿವಿಧ ಹುದ್ದೆಗಳು; ಎಸ್‌ಎಸ್‌ಎಲ್‌ಸಿ, ಐಟಿಐ, ಪದವಿ ವಿದ್ಯಾರ್ಹತೆ, 25 ಏಪ್ರಿಲ್ ಕೊನೆ ದಿನ
ಜನ್ ಧನ್ ಖಾತೆಯಲ್ಲಿ ವಿಮೆ ಸೌಲಭ್ಯ;1 ಲಕ್ಷ ಅಪಘಾತ ವಿಮೆ
ಜನ್ ಧನ್ ಗ್ರಾಹಕರಿಗೆ (Jan Dhan Customer) ರೂ.1 ಲಕ್ಷ ಅಪಘಾತ ವಿಮಾ ಪಾಲಿಸಿ (Accident Insurance Policy) ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ ರೂ.30,000 ಜೀವ ವಿಮಾ ರಕ್ಷಣೆ (Life Insurance Cover) ನೀಡಲಾಗುತ್ತದೆ.
ಹೌದು, ಅಪಘಾದಲ್ಲಿ ಮರಣ ಹೊಂದಿದಲ್ಲಿ ಖಾತೆದಾರರ ಕುಟುಂಬಕ್ಕೆ ರೂ.1 ಲಕ್ಷ ವಿಮಾ ಸೌಲಭ್ಯ (Insurance Facility) ನೀಡಲಾಗುತ್ತದೆ. ಮತ್ತೊಂದೆಡೆ.. ಸಾಮಾನ್ಯ ಸಂದರ್ಭಗಳಲ್ಲಿ ಸಾವು ಸಂಭವಿಸಿದರೆ ರೂ. 30,000 ವಿಮಾ ರಕ್ಷಣೆಯ ಮೊತ್ತವನ್ನು ಒದಗಿಸಲಾಗುತ್ತದೆ.
ಇದನ್ನು ಓದಿ: ಪಾನ್ ಕಾರ್ಡ್ ಹೊಂದಿರುವವರಿಗೆ ಬಿಗ್ ನ್ಯೂಸ್: ಪ್ಯಾನ್-ಆಧಾರ್ ಲಿಂಕ್ ಆಯ್ಕೆಯಲ್ಲಿ ಭಾರಿ ಬದಲಾವಣೆ!
ಜನ್ ಧನ್ ಖಾತೆ ಹೇಗೆ ತೆರೆಯುವುದು?
ಜನ್ ಧನ್ ಖಾತೆಯನ್ನು(Jan Dhan Account) ತ ತೆರೆಯಲು ಹತ್ತಿರದ ಬ್ಯಾಂಕ್ ಗೆ ಹೋಗಿ ನೀವು ಜನ್ ಧನ್ ಖಾತೆಯನ್ನು ತೆರೆಯಬಹುದಾಗಿದ್ದು, ಇದಕ್ಕಾಗಿ ಅರ್ಜಿದಾರರು ಫಾರ್ಮ್ ಅನ್ನು ಭರ್ತಿ ಮಾಡಿ, ಫಾರ್ಮ್ ನಲ್ಲಿರುವ ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಶಾಖೆಯ ಹೆಸರು, ಉದ್ಯೋಗ, ವಾರ್ಷಿಕ ಆದಾಯ, ಅರ್ಜಿದಾರರ ವಿಳಾಸ, ನಾಮಿನಿ ಸೇರಿದಂತೆ ಮುಂತಾದ ವಿವರವಾದ ಮಾಹಿತಿಯನ್ನು ನೀಡಬೇಕು.
10 ವರ್ಷಕ್ಕಿಂತ ಮೇಲ್ಪಟ್ಟ ಭಾರತೀಯ ನಾಗರಿಕರ ಹೆಸರಿನಲ್ಲಿ ಈ ಖಾತೆ ತೆರೆಯಬಹದಾಗಿದ್ದು, ಇದಕ್ಕಾಗಿ ನೀವು ಆಧಾರ್ ಕಾರ್ಡ್ (Aadhaar Card) ಮತ್ತು ಪ್ಯಾನ್ ಕಾರ್ಡ್ (PAN Card) ಹೊಂದಿರಬೇಕು.
ಇದನ್ನು ಓದಿ: ಪ್ರಧಾನಮಂತ್ರಿ ಟ್ರ್ಯಾಕ್ಟರ್ ಯೋಜನೆ: ಅದ್ಭುತ ಅವಕಾಶ, ಅರ್ಧ ಬೆಲೆಗೆ ಟ್ರ್ಯಾಕ್ಟರ್; ಅರ್ಹತೆ, ಅರ್ಜಿ ವಿವರ ಇಲ್ಲಿದೆ!