ಬೆಂಗಳೂರು: ನಗರದ ಹೊರವಲಯದಲ್ಲಿ ಶರಣಾಗುವಂತೆ ಹೇಳಿದ್ದ ಅಧಿಕಾರಿಯೊಬ್ಬರ ಮೇಲೆ ರೌಡಿಶೀಟರ್ ಹಲ್ಲೆ ನಡೆಸಿದ ನಂತರ ಪೊಲೀಸರು ಸೋಮವಾರ ಬೆಳಿಗ್ಗೆ ಆತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಯಸಂದ್ರ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಬಂಧಿತನಾಗಿರುವ ಲೋಕೇಶ್ (40) ವಿರುದ್ಧ ಕೊಲೆ, ಸುಲಿಗೆ ಮತ್ತು ಅಪಹರಣದ ಆರೋಪಗಳು ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸುಳಿವಿನ ಮೇರೆಗೆ, ಆ ಪ್ರದೇಶದಲ್ಲಿ ಲೋಕೇಶ್ ಕಾಣಿಸಿಕೊಂಡಿದ್ದು, ಪೊಲೀಸ್ ತಂಡವು ಆತನನ್ನು ಶರಣಾಗುವಂತೆ ಹೇಳಿದೆ. ಆದರೆ, ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ, ಆತ ಅಧಿಕಾರಿಯೊಬ್ಬರ ಮೇಲೆ ದಾಳಿ ಮಾಡಿದ್ದಾನೆ. ಕೂಡಲೇ ಆತ್ಮರಕ್ಷಣೆಗಾಗಿ, ಪೊಲೀಸ್ ತಂಡವು ಆತನ ಕಾಲಿಗೆ ಗುಂಡು ಹಾರಿಸಿದೆ. ಆತನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಅಪಾಯದಿಂದ ಪಾರಾಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಕೊಲೆ ಯತ್ನದ ಪ್ರಕರಣದಲ್ಲೂ ಬೇಕಾಗಿದ್ದ ಲೋಕೇಶ್ ಮತ್ತು ಆತನ ಸಹಚರರು ಮತ್ತೊಬ್ಬ ರೌಡಿಶೀಟರ್ ಅನ್ನು ಕೊಲ್ಲಲು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.