Renukaswamy murder case : ನಟ ದರ್ಶನ್, ಪವಿತ್ರಾ ಗೌಡ ಸೇರಿ 7 ಮಂದಿಯ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಹಿರಿಯ ವಕೀಲ ಸಿ.ವಿ ನಾಗೇಶ್ ನಟ ದರ್ಶನ್ ಕೇಸ್‌ಗೆ ಹೊಸ ಟ್ವಿಸ್ಟ್ ಕೊಡುತ್ತಿದ್ದಾರೆ.
ಹೌದು, ‘ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ವಿರುದ್ಧದ ಸಾಕ್ಷಿಗಳೇ ಸೂಕ್ತವಾಗಿಲ್ಲ. ಪಂಚನಾಮೆಯಲ್ಲಿ ರಕ್ತದ ಕಲೆ ಬರುತ್ತೆ. ಆದರೆ FSL ವರದಿಯಲ್ಲಿ ರಕ್ತದ ಕಲೆಯೇ ಇಲ್ಲ. ಹಾಗಿದ್ರೆ ಯಾರು ಇಲ್ಲಿ ಸಾಕ್ಷಿಗಳ ಪ್ಲಾಂಟ್ ಮಾಡಿದ್ದು? ಇಂತಹ ಸಾಕ್ಷಿಗಳ ಸೃಷ್ಟಿಗೂ ಮಿತಿ ಇರಬೇಕು’ ಎಂದು ಸಿ.ವಿ ನಾಗೇಶ್ ವಾದ ಮಂಡಿಸಿದ್ದಾರೆ.
ಪಟ್ಟಣಗೆರೆ ಶೆಡ್‌ನ ಸ್ಥಳದಲ್ಲಿ ಸಿಕ್ಕ ಮಣ್ಣನ್ನ ರಿಕವರಿ ಮಾಡಿರುತ್ತಾರೆ. ಅದರಲ್ಲಿ ಯಾವುದೇ ರಕ್ತದ ಕುರುಹುಗಳ ಬಗ್ಗೆ ಹೇಳಿಲ್ಲ. ಇಂದು ಪ್ಯಾಕೆಟ್ ಮಣ್ಣಿನ ಕವರ್ ನೀಡಿದ್ದರು. ಅದನ್ನ ಪರಿಶೀಲನೆ ಮಾಡಿದ್ದಾಗಿ ಹೇಳಿದ್ದಾರೆ.
ಆದರೆ ಪಂಚನಾಮೆಯಲ್ಲಿ ಮಣ್ಣನ್ನು ಕಲೆಕ್ಟ್ ಮಾಡಿದ್ದು ಏಕೆ ಹೇಳಿಲ್ಲ. ಹೇಗೆ FSLಗೆ ಕಳುಹಿಸಿದ್ದಾರೆ. ಇನ್ನೊಂದು ಮಾದರಿ ಸಾಕ್ಷಿಯ ಸೃಷ್ಟಿಯಾಗಿದೆ. ಪೊಲೀಸಿನವರು ಹೇಳ್ತಾರೆ ಆ ಮಣ್ಣು ಅವರ ಶೂನಲ್ಲಿದ್ದ ಮಣ್ಣಿಗೆ ಮ್ಯಾಚ್ ಅಂತಾರೆ. ಇಲ್ಲಿ ನ್ಯಾಯದ ಕಗ್ಗೊಲೆಯಾಗಿದೆ’…
‘ದರ್ಶನ್ ಅಮಾಯಕ.. ಎಲ್ಲವೂ ಪ್ಲಾಂಟೆಡ್’
ಇನ್ನು, ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದ ಪಂಚನಾಮೆ ಸಾಕ್ಷಿ ಹೇಳ್ತಾರೆ. ನಾವು ಹೋಗಿ ನೋಡಿದಾಗ ಒಂದು ಮರದ ಸಣ್ಣ ರೆಂಬೆ 2 ಅಡಿ ಇದ್ದು, ರಕ್ತದ ಕಲೆ ಇರುತ್ತದೆ. ಅಲ್ಲಿದ್ದ ಎರಡು ರೆಂಬೆಯಲ್ಲಿ ರಕ್ತದ ಕಲೆ ಇರುತ್ತದೆ. ಹೀಗೆ ಪಂಚನಾಮೆ ಮಾಡಿದಾಗ ಪಂಚ ಸಾಕ್ಷಿ ಹೇಳ್ತಾರೆ. ಆದರೆ ಎಫ್ಎಸ್ಎಲ್ ವರದಿಯಲ್ಲಿ, ಮರದ ಕೊಂಬೆಯಲ್ಲಿ ರಕ್ತದ ಕಲೆ ಇಲ್ಲ ಅಂತಾರೆ.
ಈ ರೀತಿ ಫ್ಯಾಬ್ರಿಕೇಷನ್‌ಗೂ ಒಂದು ಲಿಮಿಟ್ ಇರಬೇಕು. ಇಷ್ಟರ ಮಟ್ಟಿಗೆ ಮಾಡಬಾರದು ಎಂದು ದರ್ಶನ್ ಪರ ಹಿರಿಯ ವಕೀಲರು ಪ್ರಚಂಡ ವಾದ ಮಂಡಿಸಿದ್ದಾರೆ.