ನವದೆಹಲಿ: ಮಕ್ಕಳ ಕೋವಿಡ್ ಚಿಕಿತ್ಸೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಕ್ಕಳಿಗೆ ರೆಮ್ಡಿಸಿವಿರ್, ಸ್ಟಿರಾಯ್ಡ್ ಬಳಸಬೇಡಿ ಎಂದು ಸೂಚಿಸಿದೆ.
ರೆಮ್ಡಿಸಿವಿರ್ ತುರ್ತು ಬಳಕೆಗೆ ಮಾತ್ರ ಅವಕಾಶವಿದ್ದು, 18 ವರ್ಷ ಕೆಳಗಿನ ಮಕ್ಕಳ ಚಿಕಿತ್ಸೆಗೆ ರೆಮ್ಡಿಸಿವಿರ್ ಬಳಸುವುದು ಅಪಾಯಕಾರಿಯಾಗಿದೆ. ಅದೇ ರೀತಿ ಸಣ್ಣಪುಟ್ಟ ರೋಗ ಲಕ್ಷಣ ಇರುವ ಮಕ್ಕಳ ಚಿಕಿತ್ಸೆ ಸ್ಟಿರಾಯ್ಡ್ ಬಳಸದಂತೆ ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಲಾಗಿದೆ.
ಹೊಸ ಮಾರ್ಗಸೂಚಿ: ಮಕ್ಕಳು ಮಾಸ್ಕ್ ಧರಿಸಬೇಕಾಗಿಲ್ಲ!
ಇನ್ನು, ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಹೃದಯ ಕಾಯಿಲೆ ತಡೆಗಟ್ಟಲು 5 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಫೇಸ್ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
6 ರಿಂದ 11 ವರ್ಷದೊಳಗಿನ ಮಕ್ಕಳು ಮಾಸ್ಕ್ ಧರಿಸಬಹುದು. ಆದರೆ, ಈ ಮಕ್ಕಳು ಪೋಷಕರು ಮತ್ತು ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಮಾಸ್ಕ್ ಗಳನ್ನು ಧರಿಸಬೇಕು ಎಂದು ಹೇಳಲಾಗಿದೆ.