Haryana election: ಹರ್ಯಾಣದಲ್ಲಿ ಕಾಂಗ್ರೆಸ್ ಮತ್ತೆ ಮುಗ್ಗರಿಸಿದೆ. ಪ್ರಬಲ ಆಡಳಿತ ವಿರೋಧಿ ಅಲೆ ಇದ್ದರೂ ಕಾಂಗ್ರೆಸ್ ಗೆಲುವು ಪಡೆಯಲಿಲ್ಲವೇಕೆ ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಹರ್ಯಾಣದಲ್ಲಿ ಕಾಂಗ್ರೆಸ್ ಅಧಿಕಾರ ‘ಕೈ’ ತಪ್ಪಲು 5 ಪ್ರಮುಖ ಕಾರಣಗಳು ಹೀಗಿವೆ
ಕಾಂಗ್ರೆಸ್ ಸೋಲಿಗೆ ಪ್ರಮುಖ ಕಾರಣಗಳು:
1. ಜಾಟ್ ಸಮುದಾಯದ ದೀಪೇಂದರ್ ಹೂಡಾ- ದಲಿತ ನಾಯಕಿ ಸೆಲ್ಜಾ ನಡುವಿನ ವೈಮನಸ್ಸನ್ನು ಕಾಂಗ್ರೆಸ್ ಬಗೆಹರಿಸಲಿಲ್ಲ.
2. ಜಾಟ್ ಹೊರತಾದ ಒಬಿಸಿಗಳನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಕಾಂಗ್ರೆಸ್ ಈ ವಿಚಾರದಲ್ಲಿ ಸೋತಿದೆ. ಕಳೆದೆರಡು ಚುನಾವಣೆಯಲ್ಲೂ ಬಿಜೆಪಿ ಇದೇ ಅಸ್ತ್ರ ಬಳಸಿತ್ತು ಎಂಬುದು ಗಮನಾರ್ಹ.
3. ಕಾಂಗ್ರೆಸ್ ನಂಬಿ ಕೂತಿದ್ದು ಜಾಟ್ ಮತ್ತು ದಲಿತ ಮತಗಳನ್ನು. ಆದರೆ ಹರ್ಯಾಣ ಚುನಾವಣಾ ಕಣದಲ್ಲಿ ಜಾಟ್ ಮತ ಕೇಂದ್ರಿತ ಐಎನ್‌ಎಲ್‌ಡಿ, ಜೆಜೆಪಿ ಕಣದಲ್ಲಿದ್ದವು. ದಲಿತ ಮತ ಧ್ರುವೀಕರಿಸುವ ಬಿಎಸ್‌ಪಿ, ಎಎಸ್‌ಪಿ ಸ್ಪರ್ಧಿಸಿದ್ದವು. ವಿರೋಧ ಮತಗಳು ಚದುರಿರುವ ಸಾಧ್ಯತೆ ಇದೆ.
4. ಹೂಡಾ ಹಿಂಬಾಲಕರೇ 90ರಲ್ಲಿ 72 ಕ್ಷೇತ್ರಗಳಲ್ಲಿ ಟಿಕೆಟ್ ಪಡೆದಿದ್ದರು. ಇದು ಆಂತರಿಕ ಸಿಟ್ಟಿಗೆ ಕಾರಣವಾಗಿತ್ತು.
5. ರಾಜ್ಯ ರಾಜಕಾರಣಕ್ಕೆ ಸೆಲ್ಜಾರನ್ನು ಕರೆತರಲಿಲ್ಲವೆಂಬ ಸಿಟ್ಟು ದಲಿತ ಮತದಾರರಲ್ಲಿ ಇತ್ತು.
ಇದನ್ನೂ ಓದಿ: ಹರಿಯಾಣದಲ್ಲಿ ರಣರೋಚಕ ಫಲಿತಾಂಶ… ಬಿಜೆಪಿ ಭಾರೀ ಮುನ್ನಡೆ