2018ರಲ್ಲಿ ಸ್ಥಗಿತಗೊಂಡಿದ್ದ ಯಶಸ್ವಿನಿ ಯೋಜನೆ ಮರು ಜಾರಿಗೆ ಸರ್ಕಾರ ಮುಂದಾಗಿದ್ದು, ಈ ಕುರಿತು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದ್ದು, 2023ರ ಜನವರಿ 1ರಿಂದ ಯೋಜನೆಯನ್ನು ಜಾರಿಗೆ ತರಲಿದ್ದು, 2022ರ ನವಂಬರ್ 1ರಿಂದಲೇ ಫಲಾನುಭವಿಗಳು ನೋಂದಣಿ ಆರಂಭಿಸಬಹುದಾಗಿದೆ.
ಗ್ರಾಮೀಣ ಪ್ರದೇಶದ ಸಹಕಾರಿ ಸಂಘಗಳ ಸದಸ್ಯರ 4 ಜನರ ಕುಟುಂಬಕ್ಕೆ ವಾರ್ಷಿಕ ತಲಾ 500 ರೂ ನಗರಪ್ರದೇಶದ ಸಹಕಾರಿಗಳಿಗೆ 1000 ರೂ ನಿಗದಿಪಡಿಸಲಾಗಿದೆ.4 ಮಂದಿಗಿಂತ ಹೆಚ್ಚಿರುವ ಕುಟುಂಬ ಸದಸ್ಯರಿಗೆ ತಲಾ 200 ರೂ ಪಾವತಿಸಿ ಹೆಸರು ನೋಂದಾಯಿಸಬಹುದು. ಯಶಸ್ವಿನಿ ಕಾರ್ಡ್ ಹೊಂದಿರುವವರು ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದು.
ಈ ಯೋಜನೆಯಡಿಯ ಫಲಾನುಭವಿಗಳು ನಿಗದಿತ ಆಸ್ಪತ್ರೆಗಳಲ್ಲಿ 5 ಲಕ್ಷ ರೂವರೆಗಿನ ವೆಚ್ಚಕ್ಕೆ ಸಮನಾಗಿ ಚಿಕಿತ್ಸೆ ಪಡೆಯಬಹುದಾಗಿದ್ದು, ಇದಕ್ಕೆ ಸಹಕಾರಿ ಸಂಘಗಳ ಸದಸ್ಯರು & ಕುಟುಂಬದವರು ಅರ್ಹರಿರುತ್ತಾರೆ.
ಯಶಸ್ವಿನಿ ಆರೋಗ್ಯ ವಿಮೆ ಬಗ್ಗೆ ನಿಮಗೆಷ್ಟು ಗೊತ್ತು?
>ಪ್ರೀಮಿಯಂ: (ನಾಲ್ವರಿಗೆ) ಹಳ್ಳಿಗಳಲ್ಲಿ ₹500, ನಗರಗಳಲ್ಲಿ ₹1000(ನಾಲ್ವರಿಗಿಂತ ಹೆಚ್ಚು ಮಂದಿ ಇದ್ದರೆ ಒಬ್ಬರಿಗೆ ₹100; ನಗರಗಳಲ್ಲಿ ಒಬ್ಬರಿಗೆ ₹200): ವಿ.ಸೂ.-ಎಸ್ಸಿ, ಎಸ್ಟಿ ಕುಟುಂಬಗಳಿಗೆ ಶುಲ್ಕವಿಲ್ಲ.
>ಅರ್ಹತೆ: ಕರ್ನಾಟಕ ಸಹಕಾರ, ಸೌಹಾರ್ದ ಸಹಕಾರಿ, ಬಹುರಾಜ್ಯ ಸಹಕಾರಿ ಸಂಘಗಳ ಕಾಯದೆಯಡಿ ನೋಂದಾಯಿಸಿರುವ ರಾಜ್ಯದ ಎಲ್ಲಾ ಸಹಕಾರಿ ಸಂಘಗಳ ಸದಸ್ಯರು & ಅವರ ಕುಟುಂಬಸ್ಥರು.
>ವಿಮೆ ಮೊತ್ತ: ₹5 ಲಕ್ಷ
>ಯೋಜನೆಯ ಅವಧಿ: 2023ರ ಜ.1ರಿಂದ ಡಿ.31ರವರೆಗೆ.