DL smart card : ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ರಾಜ್ಯದಲ್ಲಿ ಈವರೆಗೆ ಇದ್ದ ಡ್ರೈವಿಂಗ್ ಲೈಸೆನ್ಸ್ (DL) ಮತ್ತು ವಾಹನ ನೋಂದಣಿ ಪ್ರಮಾಣ ಪತ್ರಕ್ಕೆ (RC)ವಿದಾಯ ಹೇಳಲು ಸರ್ಕಾರ ಮುಂದಾಗಿದೆ ಎನ್ನಲಾಗಿದ್ದು, ಹೊಸ ವರ್ಷದಿಂದಲೇ ಈ ಹೊಸ ನಿಯಮ ಜಾರಿಯಾಗಲಿದೆ ಎಂದು ಹೇಳಲಾಗಿದೆ.
ಹೌದು, 2025ರ ಜನವರಿಯಿಂದ ಸ್ಮಾರ್ಟ್ ಡಿಎಲ್ ಮತ್ತು ಆರ್‌ಸಿ ಕಾರ್ಡ್ ವಿತರಿಸುವ ವ್ಯವಸ್ಥೆಯು ರಾಜ್ಯದೆಲ್ಲೆಡೆ ಅನುಷ್ಠಾನಗೊಳಿಸುವ ಮಹತ್ವದ ಬದಲಾವಣೆ ತರಲು ಸರ್ಕಾರ ನಿರ್ಧರಿಸಿದೆ. ಈ ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಡಿಎಲ್ ಮತ್ತು ಆರ್‌ಸಿ ವಿತರಣೆಯಾಗಲಿದ್ದು, ಇದರಲ್ಲಿ ಕ್ಯೂಆರ್ ಕೋಡ್ ಮತ್ತು ಚಿಪ್ ಕೂಡ ಇರಲಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಋತುಚಕ್ರದ ರಜೆ..!
DL smart card : ಒಂದು ದೇಶ ಒಂದು ಕಾರ್ಡ್ ವ್ಯವಸ್ಥೆ ಜಾರಿ
ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು 2019ರಲ್ಲಿ ಒಂದು ದೇಶ ಒಂದು ಕಾರ್ಡ್ ವ್ಯವಸ್ಥೆ ಜಾರಿ ಮಾಡುವಂತೆ ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದ್ದು, ಈಗಾಗಲೇ ಈ ಯೋಜನೆಯಡಿ ಛತ್ತೀಸಗಢ, ಹಿಮಾಚಲ ಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ.
ಆದರೆ, ಕರ್ನಾಟಕದಲ್ಲಿ ಡಿಎಲ್, ಆರ್‌ಸಿ ಕಾರ್ಡ್ ವಿತರಣೆಗೆ ನೀಡಿದ್ದ ಗುತ್ತಿಗೆ ಅವಧಿಯು ಮುಂದಿನ ಫೆಬ್ರವರಿವರೆಗೆ ಇರುವುದರಿಂದ ಆ ಬಳಿಕ ಈ ಹೊಸ ಯೋಜನೆ ಅನುಷ್ಠಾನಗೊಳಿಸಲು ಸಾರಿಗೆ ಇಲಾಖೆ ಮುಂದಾಗಿದ್ದು, ಡಿಎಲ್, ಆರ್‌ಸಿ ಕಾರ್ಡ್‌ನ್ನು ಸ್ಮಾರ್ಟ್‌ಕಾರ್ಡ್ ರೂಪದಲ್ಲಿ ನೀಡಲು ಟೆಂಡರ್ ಕರೆಯಲಾಗಿದೆ.
ಇದನ್ನೂ ಓದಿ: ಸ್ಟಾರ್ ಯೂಟ್ಯೂಬರ್ ಹರ್ಷ ಸಾಯಿ ವಿರುದ್ದ ಯುವತಿಯಿಂದ ಅತ್ಯಾಚಾರ ಆರೋಪ!!
DL smart card : ಸಂಪೂರ್ಣ ಮಾಹಿತಿಯು ಈ ಕಾರ್ಡ್‌ನಲ್ಲೇ ಲಭ್ಯ
ಈಗಿರುವ ಕಾರ್ಡ್‌ನಲ್ಲಿ ಕೇವಲ ಚಿಪ್ ಮಾತ್ರ ಇರುವುದರಿಂದ ಚಿಪ್‌ನಲ್ಲಿರುವ ಮಾಹಿತಿ ಪರಿಶೀಲಿಸಲು ಆರ್‌ಟಿಒ, ಪೊಲೀಸ್ ಠಾಣೆಗಳಿಗೆ ಹೋಗಬೇಕಾಗಿತ್ತು. ಈಗ ಹೊಸ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಸೌಲಭ್ಯ ಇರುವುದರಿಂದ ಪರದಾಟ ತಪ್ಪಲಿದ್ದು, ಸಂಪೂರ್ಣ ಮಾಹಿತಿಯು ಈ ಕಾರ್ಡ್‌ನಲ್ಲೇ ಲಭ್ಯವಾಗಲಿದೆ.
ಡ್ರೈವಿಂಗ್ ಲೈಸೆನ್ಸ್‌ನಲ್ಲಿ ಮಾಲೀಕರ ಹೆಸರು, ಜನ್ಮದಿನಾಂಕ, ರಕ್ತದ ಗುಂಪು, ಫೋಟೋ, ಕಾರ್ಡ್‌ನ ಅವಧಿ, ಮೊಬೈಲ್ ನಂಬರ್ ಸೇರಿದಂತೆ ಸಂಪೂರ್ಣ ವಿವರಗಳು ಇದರಲ್ಲೇ ಸಿಗಲಿದ್ದು, ಆರ್.ಸಿ ಕಾರ್ಡ್‌ನ ಮುಂದೆ ರಿಜಿಸ್ಟ್ರೇಷನ್ ನಂಬರ್, ನೋಂದಣಿ ದಿನಾಂಕ, ವಾಹನ ಚಾಸಿಸ್, ಇಂಜಿನ್ ನಂಬರ್, ವಾಹನ ಮಾಲೀಕರ ವಿಳಾಸ ಇರಲಿದೆ.
ಇನ್ನು, ಕಾರ್ಡ್ ನ ಹಿಂಬದಿಯಲ್ಲಿರುವ ಕ್ಯೂಆರ್ ಕೋಡ್‌ನೊಂದಿಗೆ ವಾಹನ ತಯಾರಕ ಕಂಪನಿ ಹೆಸರು, ಮಾಡಲ್ ನಂಬರ್ ಮತ್ತು ಲೋನ್ ನೀಡಿರುವ ಸಂಸ್ಥೆಯ ಮಾಹಿತಿಯೂ ಸೇರಿದಂತೆ ಎಲ್ಲ ವಿವರ ಲಭ್ಯವಾಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಖ್ಯಾತ ನಟಿ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಊರ್ಮಿಳಾ!