RBI Governor : ಭಾರತೀಯ ರಿಸರ್ವ್ ಬ್ಯಾಂಕ್ ನ 26ನೇ ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ (Sanjay Malhotra) ಅವರು ನಿನ್ನೆ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಹೌದು, ಡಿ.11 ರಿಂದ (ನಿನ್ನೆಯಿಂದ) ಜಾರಿಗೆ ಬರುವಂತೆ ಮುಂದಿನ 3 ವರ್ಷಗಳ ಕಾಲ ಗವರ್ನರ್ ಆಗಿ ಅಧಿಕಾರ ನಿರ್ವಹಿಸಲಿದ್ದಾರೆ ಎಂದು ಆರ್‌ಬಿಐ ಮಾಹಿತಿ ನೀಡಿದೆ. ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿ ಡಿ.10ರಂದು (ಮಂಗಳವಾರ) ಕೊನೆಗೊಂಡಿತು. ಹಿನ್ನೆಲೆಯಲ್ಲಿ ಬುಧವಾರ ಮಲ್ಹೋತ್ರಾ ಅಧಿಕಾರ ಸ್ವೀಕರಿಸಿದ್ದಾರೆ.
RBI Governor : RBI ಗವರ್ನರ್ ಸಂಬಳ ಎಷ್ಟು ಗೊತ್ತಾ?
ಇನ್ನು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ನೂತನ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅಧಿಕಾರ ಸ್ವೀಕರಿಸಿದ್ದು, ಆರ್‌ಬಿಐ ಗವರ್ನರ್ ಮೂಲ ವೇತನ ತಿಂಗಳಿಗೆ 2.5 ಲಕ್ಷ ರೂ ಇರುತ್ತದೆ.
ಹೌದು, ಆರ್‌ಬಿಐ ಗವರ್ನರ್ ಮತ್ತು ಡೆಪ್ಯುಟಿ ಗವರ್ನರ್‌ಗಳ ಮೂಲ ವೇತನವನ್ನು 2016ರ ಜನವರಿಯಿಂದ ಪೂರ್ವಾನ್ವಯವಾಗುವಂತೆ ಪರಿಷ್ಕರಿಸಲಾಗಿದೆ. ಅಲ್ಲಿಯವರೆಗೆ ಮೂಲ ವೇತನ 90 ಸಾವಿರ ರೂ. ಇತ್ತು. ಅಚ್ಚರಿ ಎಂದರೆ ವಿವಿಧ RBI ನಿಯಂತ್ರಿತ ಬ್ಯಾಂಕ್‌ಗಳ ಮುಖ್ಯಸ್ಥರು RBI ಗವರ್ನರ್‌ಗಿಂತ ಹೆಚ್ಚು ವೇತನ ಪಡೆಯುತ್ತಾರೆ.