ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಅತ್ಯಾಚಾರ ಪ್ರಕರಣ ಸಂತ್ರಸ್ತೆ ಎಸ್‍ಐಟಿ ರಚನೆಯನ್ನೇ ಪ್ರಶ್ನಿಸಿ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾಳೆ.
ಹೌದು, ಸಂತ್ರಸ್ತೆ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಅರ್ಜಿಯಲ್ಲಿ ಎಸ್‍ಐಟಿ ರಚನೆ, ತನಿಖೆಯ ವಿಧಾನ ಮತ್ತು ಎಸ್‍ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ನಡೆದ ತನಿಖೆಯನ್ನು ಯುವತಿ ಪ್ರಶ್ನಿಸಿದ್ದು, ಎಸ್‍ಐಟಿ ರಚನೆಯೇ ಸರಿ ಇಲ್ಲ ಸರ್ಕಾರ ಸ್ವಯಂ ಪ್ರೇರಿತವಾಗಿ ರಚನೆ ಮಾಡಿಲ್ಲ, ಎಸ್‍ಐಟಿ ರಚನೆಯೇ ಸರಿ ಇಲ್ಲವೆಂದಾಗ ಅದರ ವರದಿಯನ್ನು ಕೋರ್ಟಿಗೆ ಸಲ್ಲಿಕೆ ಮಾಡಿ, ವಿಚಾರಣೆ ನಡೆಸುವುದು ಎಷ್ಟು ಸರಿ ಎಂದು ಸಿಡಿ ಪ್ರಕಾರಣದ ಸಂತ್ರಸ್ತ ಯುವತಿ ಪ್ರಶ್ನಿಸಿದ್ದಾಳೆ.
ಇನ್ನು, ಸಂತ್ರಸ್ತೆ ಯುವತಿ ಪರ ವಕೀಲರ ಆಕ್ಷೇಪದ ನಡುವೆಯೂ ಸಂಬಂಧಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪ್ರಕರಣದ ಅಂತಿಮ ವರದಿ ಸಲ್ಲಿಸಲು ಎಸ್‍ಐಟಿಗೆ ಸೂಚಿಸಿ, ಮಧ್ಯಂತರ ತಡೆಯಾಜ್ಞೆಯನ್ನು ತೆರವು ಮಾಡಿತ್ತು.
ಈ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಎಸ್‍ಐಟಿ ಕ್ಲೀನ್ ಚಿಟ್ ಕೊಟ್ಟಿದ್ದು ಇದು ಸಮ್ಮತಿಯ ಸೆಕ್ಸ್ ಪ್ರಕರಣ, ಇಲ್ಲಿ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಇಲ್ಲಿ ಅತ್ಯಾಚಾರ ನಡೆದಿದೆ ಎಂಬ ಅಂಶ ಬೆಳಕಿಗೆ ಬಂದಿಲ್ಲ,ಇದನ್ನು ಯುವತಿಯೂ ಒಪ್ಪಿಕೊಂಡಿದ್ದಾಳೆ ಎಂದಿದೆ.