ಬೆಂಗಳೂರು: ರಾಜ್ಯದಲ್ಲಿ ಬುಗಿಲೆದ್ದ ಹಿಜಾಬ್-ಕೇಸರಿ ಶಾಲು ವಿವಾದದಿಂದ ರಾಜ್ಯದ ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರದಿಂದ 3 ದಿನ ರಜೆ ನೀಡಲಾಗಿತ್ತು. ಇದೀಗ ಈ ರಜೆಯನ್ನು ಮತ್ತೆ ವಿಸ್ತರಿಸಲಾಗಿದೆ.
ಹೌದು, ರಾಜ್ಯದಲ್ಲಿ ಹಿಜಾಬ್ – ಕೇಸರಿ ಶಾಲು ವಿವಾದ ತಾರಕಕ್ಕೆರಿದ ಹಿನ್ನಲೆ ಫೆಬ್ರುವರಿ 8 ರಿಂದ 10 ರ ವರೆಗೆ ಸರ್ಕಾರ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ಆದರೆ, ಸರ್ಕಾರ ಈ ರಜೆಯನ್ನು ಫೆಬ್ರುವರಿ 16ರವರೆಗೆ ವಿಸ್ತರಿಸಲಾಗಿದ್ದು, ವೈದ್ಯ ಕಾಲೇಜಿಗೆ ಇದು ಅನ್ವಯವಾಗುವುದಿಲ್ಲ. ಇನ್ನು ಪಿಯು ಕಾಲೇಜಿಗೆ ರಜೆ ನೀಡಬೇಕೇ, ಬೇಡವೇ ಎಂಬ ಬಗ್ಗೆ ಇಂದು ನಿರ್ಧಾರ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.