Rain alert : ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಫೆ.1 ರಿಂದ ಮೂರು ದಿನಗಳು ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ.
ಹೌದು, ಪೂರ್ವೋತ್ತರ ಮಾರುತಗಳು ಹಾದು ಹೋಗುವ ಕಾರಣ ಫೆಬ್ರವರಿ 1ರಿಂದ ಬೆಂಗಳೂರು ನಗರ ಸೇರಿದಂತೆ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು, ಮತ್ತು ಶಿವಮೊಗ್ಗ ಜಿಲ್ಲೆಯ ಒಂದೆರಡು ಕಡೆ ಗುಡುಗು ಸಹಿತ ಸಾಧಾರಣೆ ಮಳೆಯಾಗುವ ಸಂಭವವಿದ್ದು, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿಯ ಒಂದೆರಡು ಕಡೆ ಸಾಧಾರಣೆ ಮಳೆಯ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.
ಇನ್ನು ಉಳಿದಂತೆ ತುಮಕೂರು, ವಿಜಯನಗರ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರುನಲ್ಲಿ ಒಣಹವೆ, ಚಳಿ ಇರಲಿದೆ.
ಇದನ್ನೂ ಓದಿ: BIG BREAKING | ಕುಂಭಮೇಳದಲ್ಲಿ ಕಾಲ್ತುಳಿತ… 17 ಮಂದಿ ಸಾವು?