ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನದ ನೆನಪಿನಲ್ಲಿ ಭಾರತೀಯ ಅಂಚೆ ಇಲಾಖೆಯು ಪುನೀತ್ ಅವರ ಭಾವಚಿತ್ರ ಇರುವ ಐದು ವಿಶೇಷ ‘ಪಿಕ್ಚರ್ ಪೋಸ್ಟ್ ಕಾರ್ಡ್’ಗಳನ್ನು ಬಿಡುಗಡೆ ಮಾಡಿದೆ.
ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಪೋಸ್ಟ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದರು.
‘ಪುನೀತ್ ರಾಜ್‌ಕುಮಾರ್ ‘ ಅವರ ಜನ್ಮದಿನದ ಅಂಗವಾಗಿ ಅಪ್ಪು ಗಂಧದಗುಡಿ ಅಗರಬತ್ತಿ ಸಹಯೋಗದೊಂದಿಗೆ ಈ ಪೋಸ್ಟ್
ಕಾರ್ಡ್‌ಗಳನ್ನು ಹೊರತರಲಾಗಿದೆ’ ಎಂದು ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ಅವರು ತಿಳಿಸಿದ್ದಾರೆ.
ಅಸಕ್ತರು ಕರ್ನಾಟಕ ಅಂಚೆಚೀಟಿ ಬ್ಯೂರೊಗಳಿಂದ ಈ ಚಿತ್ರಗಳನ್ಮು ಪಡೆದುಕೊಳ್ಳಬಹುದು ಜೊತೆಗೆ ಮಾರ್ಚ್ 17ರಂದು ಅಪ್ಪು ಹುಟ್ಟಿದ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿಗಳನ್ನು ಸಹ ಪಡೆಯಬಹುದು ಎಂದು ತಿಳಿಸಿದರು.