ನವದೆಹಲಿ : ಕೂತವರನ್ನ ಕೂತಂತೆ ನಿಂತವರನ್ನ ನಿಂತಲ್ಲಿಯೇ ಮಂತ್ರ ಮುಗ್ದರನ್ನಾಗಿಸಿದ ಪಾಪುಲರ್ PUBG ಗೇಮ್ ಕೂಡ ಬ್ಯಾನ್ ಆಗಿದೆ. ಹೀಗಿದ್ದರೂ ಕೂಡಾ ಕೆಲವು ಬಳಕೆದಾರರಿಗೆ PUBG ಮೊಬೈಲ್ ಮತ್ತು PUBG ಲೈಟ್ ಆವೃತ್ತಿ ಭಾರತ ದೇಶದಲ್ಲಿ ಸಿಕ್ಕಿತ್ತು ಆದ್ರೇ ಇಂದಿನಿಂದ ದೇಶದಲ್ಲಿ ಸಂಪೂರ್ಣ ನಿಷೇಧಕ್ಕೆ ಒಳಪಟ್ಟಿದ್ದು, PUBG ಗೇಮ್ ದೇಶದಲ್ಲಿ ಆಡಲು ಲಭ್ಯವಿರುವುದಿಲ್ಲ.
ಚೀನಾ ಮೂಲದ PUBG ಗೇಮ್ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದ ಹಿನ್ನಲೆಯಲ್ಲಿ ಈ ಗೇಮ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಯ್ಯಪಲ್ ಸ್ಟೋರ್ ನಿಂದ ತೆಗೆದು ಹಾಕಲಾಗಿತ್ತು. ಆದರೆ ನಿಷೇಧದ ಬಳಿಕವೂ ಹಲವರು ಮೊದಲೇ PUBG ಇನ್ಸ್ಟಾಲ್ ಮಾಡಿಕೊಂಡಿದ್ದರೆ, PUBG ಲೈಟ್ ಮತ್ತು PUBG ಮೊಬೈಲ್ ದೇಶದಲ್ಲಿ ಬಳಕೆಗೆ ಲಭ್ಯವಿತ್ತು
ಆದರೆ ಸೆ. 2ರಂದು ನಿಷೇಧ ಹೇರಿದರೂ ಕಾರ್ಯ ನಿರ್ವಹಿಸುತ್ತಿದ್ದ ಚೀನಾ ಮೂಲದ ಪಬ್ಜಿ ಗೇಂ ಭಾರತದಲ್ಲಿರುವ ತನ್ನ ಸರ್ವರ್ ಗಳನ್ನೂ ಬಂದ್ ಮಾಡಲಿದ್ದು, ಇದರಿಂದ PUBG ಗೇಮ್ ಪ್ರಿಯರಿಗೆ ತಮ್ಮ ನೆಚ್ಚಿನ ಗೇಮ್ ಆಡಲು ಅವಕಾಶವಿರುವುದಿಲ್ಲ. ಇದರಿಂದ ಗೂಗಲ್ ಆ್ಯಪ್ ಸ್ಟೋರ್ನಲ್ಲೂ ಇನ್ಮುಂದೆ PUBG ಗೇಮ್ ಡೌನ್ಲೋಡ್ ಮಾಡಲು ಸಿಗುವುದಿಲ್ಲ. ನೀವು ಈಗಾಗಲೇ ಡೌನ್ಲೋಡ್ ಮಾಡಿದ್ದರೂ ಪಬ್ಜಿ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ.