ಬೆಂಗಳೂರು: ಅನರ್ಹ ಬಿಪಿಎಲ್ ಕಾರ್ಡ್ ಹೊಂದಿರುವವರ ಮಾಹಿತಿ ನೀಡಿದರೆ, ಅಂತಹವರಿಗೆ 400 ರೂ. ಬಹುಮಾನ ನೀಡುವುದಾಗಿ ಆಹಾರ ಇಲಾಖೆ ಘೋಷಿಸಿದೆ.
ಹೌದು ಸರ್ಕಾರಿ ಅನುದಾನ ಪಡೆಯುತ್ತಿರುವ ಸಿಬ್ಬಂದಿ, ಸರ್ಕಾರಿ ನೌಕರರು, ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವವರು, ನಾಲ್ಕು ಚಕ್ರದ ವಾಹನ ಹೊಂದಿರುವವರು, ಕುಟುಂಬದ ವಾರ್ಷಿಕ ಆದಾಯ 1.20ರೂ. ಲಕ್ಷಕ್ಕಿಂತ ಹೆಚ್ಚಿರುವ ಕುಟುಂಬ ಮತ್ತು ನಗರ ಪ್ರದೇಶಗಳಲ್ಲಿ ಸಾವಿರ ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಮನೆ ಹೊಂದಿರುವವರು ಅನರ್ಹರಾಗಿರುತ್ತಾರೆ.
ಈ ರೀತಿ ಅನರ್ಹ ಬಿಪಿಎಲ್ ಕಾರ್ಡ್ ಹೊಂದಿದ್ದು, ಸರ್ಕಾರಿ ಅನುದಾನ ಪಡೆಯುತ್ತಿರುವ ಇಂತವರ ಬಗ್ಗೆ ಮಾಹಿತಿ ನೀಡಿದವರಿಗೆ 400 ರೂ. ಬಹುಮಾನ ನೀಡುವುದಾಗಿ ಆಹಾರ ಇಲಾಖೆ ಘೋಷಣೆ ಮಾಡಿದೆ.