ಇಂದು ಅಪ್ರತಿಮ ವೀರ ಛತ್ರಪತಿ ಶಿವಾಜಿ ಅವರ 391ನೇ ಜನ್ಮದಿನ. ಶಿವಾಜಿ ಅವರು 1630, ಫೆ.19 ರಂದು ಪುಣೆ ಬಳಿಯ ಶಿವನೇರಿ ಕೋಟೆಯಲ್ಲಿ ಜನಿಸಿದರು. ತಂದೆ ಶಹಾಜಿ ಬೋಸ್ಲೆ, ತಾಯಿ ಜೀಜಾಬಾಯಿ. ಛತ್ರಪತಿ ಶಿವಾಜಿ 1674ರಲ್ಲಿ ಸ್ಥಾಪಿಸಿದ ಮರಾಠಾ ರಾಜ್ಯವು 1818ರವರೆಗೂ ರಾರಾಜಿಸಿತ್ತು. ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿ, ಹಿಂದೂಸ್ಥಾನವನ್ನು ಒಗ್ಗೂಡಿಸಲು ಶ್ರಮಿಸಿದ ಛತ್ರಪತಿ ಶಿವಾಜಿ ಏಪ್ರಿಲ್ 3, 1680ರಲ್ಲಿ ನಿಧನರಾದರು.
ಶಿವಾಜಿ ಜಯಂತಿಗೆ ಶುಭ ಕೋರಿದ ಪ್ರದಾನಿ ಮೋದಿ:
ಇಂದು ಛತ್ರಪತಿ ಶಿವಾಜಿ ಅವರ 391ನೇ ಜನ್ಮದಿನ. ಶಿವಾಜಿ ಮಹಾರಾಜರ ಜಯಂತಿಗೆ ಪ್ರದಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ‘ತಾಯಿಯ ಭಾರತೀಯರ ಅಮರ ಪುತ್ರ ಛತ್ರಪತಿ ಶಿವಾಜಿ ಮಹಾರಾಜ್ ಅವರ ಜನ್ಮ ದಿನಾಚರಣೆಯಂದು ನಾನು ಗೌರವ ಸಲ್ಲಿಸುತ್ತೇನೆ. ಅವರ ಅದಮ್ಯ ಧೈರ್ಯ, ಅದ್ಭುತ ಶೌರ್ಯ ಮತ್ತು ಅಸಾಧಾರಣ ಬುದ್ಧಿವಂತಿಕೆಯ ಕಥೆಯು ದೇಶವಾಸಿಗಳಿಗೆ ಯುಗ ಯುಗದಿಂದ ಸ್ಫೂರ್ತಿ ನೀಡುತ್ತದೆ’ ಎಂದು ಹೇಳಿದ್ದಾರೆ.
मां भारती के अमर सपूत छत्रपति शिवाजी महाराज को उनकी जयंती पर शत-शत नमन। उनके अदम्य साहस, अद्भुत शौर्य और असाधारण बुद्धिमत्ता की गाथा देशवासियों को युगों-युगों तक प्रेरित करती रहेगी। जय शिवाजी! pic.twitter.com/3vhVgBYp5R
— Narendra Modi (@narendramodi) February 19, 2021
ಶಿವಾಜಿ ಜಯಂತಿಗೆ ಶುಭ ಕೋರಿದ ಸಿಎಂ ಬಿ.ಎಸ್.ಯಡಿಯೂರಪ್ಪ:
ಅಪ್ರತಿಮ ವೀರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಭ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭಾರತಮಾತೆಯ ಹೆಮ್ಮೆಯ ಪುತ್ರ, ಧೈರ್ಯ ಪರಾಕ್ರಮಗಳ ಸಾಕಾರಮೂರ್ತಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು ಎಂದು ಶುಭ ಕೋರಿದ್ದು, ಅವರ ದೇಶಭಕ್ತಿ, ಹೋರಾಟ, ಸಾಧನೆಗಳು, ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಭಾರತಮಾತೆಯ ಹೆಮ್ಮೆಯ ಪುತ್ರ, ಧೈರ್ಯ ಪರಾಕ್ರಮಗಳ ಸಾಕಾರಮೂರ್ತಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ಅವರ ದೇಶಭಕ್ತಿ, ಹೋರಾಟ, ಸಾಧನೆಗಳು, ಇಂದಿಗೂ ಲಕ್ಷಾಂತರ ಜನರಿಗೆ ಸ್ಫೂರ್ತದಾಯಕವಾಗಿದೆ. pic.twitter.com/vZMs4D0Bnr
— B.S. Yediyurappa (@BSYBJP) February 19, 2021