ದಿನ ಬಳಕೆ ವಸ್ತುಗಳು ಸೇರಿದಂತೆ ಹಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ದರ ಹೆಚ್ಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಇಂದಿನಿಂದ ಜಾರಿಗೆ ಬರಲಿದ್ದು, ಈ ಹಿನ್ನೆಲೆ ಕೆಲ ವಸ್ತುಗಳ ಬೆಲೆ ಏರಿಕೆಯಾಗಲಿದೆ.
ಹೌದು, ಹಲವಾರು ಸಮಸ್ಯೆಯಿಂದ ಕಂಗೆಟ್ಟಿರೋ ಜನರ ಮತ್ತೆ ಇಂದಿನಿಂದ ಮತ್ತಷ್ಟು ಸಂಕಷ್ಟಕ್ಕೆ ಬೀಳಲಿದ್ದು, ಆಹಾರ ಪದಾರ್ಥಗಳ ಬೆಲೆಯಲ್ಲಿ ಏರಿಕೆ ಆಗುತ್ತಿರುವುದರಿಂದ ಜನಜೀವನವ ಮತ್ತಿಷ್ಟು ಹದಗೆಡುವ ಆತಂಕ ಶುರುವಾಗಿದೆ.
ಇಂದಿನಿಂದ ಇವುಗಳ ಬೆಲೆ ಏರಿಕೆ:
ಸದ್ಯಕ್ಕೆ ಅಡುಗೆ ಎಣ್ಣೆ ದರ ಸ್ವಲ್ಪ ಇಳಿಕೆಯಾಗಿದ್ದು, ಈ ಬೆನ್ನಲ್ಲೇ ಇಂದಿನಿಂದಲೇ, 43 ರೂಪಾಯಿ ಇದ್ದ ಒಂದು ಲೀಟರ್ ಮೊಸರಿನ ಬೆಲೆ 46 ರೂಪಾಯಿ ಆಗಲಿದ್ದು, ಅರ್ಧ ಲೀಟರ್ ಮೊಸರಿಗೆ 22 ಇದ್ದದ್ದು 24 ರೂಪಾಯಿ ಹೇರಿಕೆ ಆಗಲಿದೆ. 200 ಎಂಎಲ್ ಪ್ಯಾಕೆಟ್ ಬೆಲೆ ಮೇಲೆ 1 ರೂಪಾಯಿ ಹೆಚ್ಚಳವಾಗಲಿದ್ದು, ಇದಲ್ಲದೆ ಆಸ್ಪತ್ರೆ ಬೆಡ್ ಚಾರ್ಜ್, ಹೋಟೆಲ್ ಕೊಠಡಿ, ಮಂಡಕ್ಕಿ ಮೇಲೂ ಜಿಎಸ್‌ಟಿ ವಿಧಿಸಲಾಗಿದೆ.
ಇನ್ನು, ಕೆಲ ಅಗತ್ಯ ವಸ್ತುಗಳು, ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಮೀನು, ಮಾಂಸ, ಒಣಗಿಸಿದ ತರಕಾರಿ, ಜೇನುತುಪ್ಪ, ಬೆಲ್ಲ, ತುಪ್ಪ, ಅಕ್ಕಿ, ಗೋಧಿ ಸೇರಿ ಇತರೆ ಧಾನ್ಯಗಳು ದುಬಾರಿಯಾಗಲಿವೆ.
ಅಷ್ಟೇ ಅಲ್ಲ, ಎಲ್‌ಇಡಿ ಬಲ್ಬ್, ಲ್ಯಾಂಪ್‌ಗಳ ಮೇಲೂ ಶೇ.18ರಷ್ಟು, ಕ್ಯಾಸಿನೋ, ಆನ್‌ಲೈನ್ ಗೇಮ್‌ಗಳಿಗೆ ಶೇ. 28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.