Fasal Bima Yojana : ರೈತರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ‘ಪಿಎಂ ಫಸಲ್ ಬಿಮಾ ಯೋಜನೆ’ಯ ರೈತರ ಖಾತೆಗೆ ಹಣ ಬಿಡುಗಡೆಯಾಗುತ್ತಿದೆ. ಯೋಜನೆ ಅಡಿಯಲ್ಲಿ 30 ಲಕ್ಷ ರೈತರಿಗೆ ಇಂದು ‘ಬೆಳೆ ವಿಮಾ ನಿಧಿ’ಗಳನ್ನು ಬಿಡುಗಡೆ ಮಾಡಲಾಗುತ್ತದೆ.
ಹೌದು, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಇಂದು ಸೋಮವಾರ ರಾಜಸ್ಥಾನದ ಜುಂಝುನುವಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ 30 ಲಕ್ಷ ರೈತರ ಖಾತೆಗೆ ₹3,200 ಕೋಟಿ ಜಮೆ ಮಾಡಲಿದ್ದಾರೆ.
ಇದರಲ್ಲಿ ಮಧ್ಯಪ್ರದೇಶಕ್ಕೆ ₹1,156 ಕೋಟಿ, ರಾಜಸ್ಥಾನದ 7 ಲಕ್ಷ ರೈತರಿಗೆ ₹1,121 ಕೋಟಿ, ಛತ್ತೀಸ್ಗಢಕ್ಕೆ ₹150 ಕೋಟಿ ಮತ್ತು ಇತರ ರಾಜ್ಯಗಳಿಗೆ ₹773 ಕೋಟಿ ಸೇರಿವೆ. 2025ರ ಖಾರಿಫ್ ನಿಂದ ಸಬ್ಸಿಡಿ ಅಥವಾ ಪಾವತಿ ವಿಳಂಬಕ್ಕೆ ರಾಜ್ಯ ಸರ್ಕಾರಗಳಿಗೂ ವಿಮಾ ಕಂಪನಿಗಳಿಗೂ 12% ದಂಡ ವಿಧಿಸಲಾಗುತ್ತದೆ. ಇದರಿಂದ ಬೆಳೆ ವಿಮಾ ಹಣ ಖಾತೆಗೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದ ರೈತರಿಗೆ ಇದೀಗ ಸಂತಸ ಮೂಡಿಸಿದೆ.




