Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » post office investments like ppf nsc sukanya samriddhi yojana will be suspended if aadhaar is not submitted
ಪ್ರಮುಖ ಸುದ್ದಿ

ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆ ಬಂದ್, ನಿಮ್ಮ ಹಣ ಪಡೆಯಲು ಸಾಧ್ಯವಿಲ್ಲ!

ಸಾರ್ವಜನಿಕ ಭವಿಷ್ಯ ನಿಧಿ(PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC), ಹಿರಿಯ ನಾಗರಿಕ ಉಳಿತಾಯ ಯೋಜನೆ (Senior Citizen Savings Scheme) ಸೇರಿದಂತೆ ಇತರ ಅಂಚೆ ಕಚೇರಿ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡುತ್ತಿದ್ದೀರಾ? ನೀವು ಆ ಸಣ್ಣ…

Author Avatar

Vijayaprabha

April 7, 20237:49 am Aadhar cardfeaturedinvestmentsNSCPost OfficePost office investments like ppf NSC Sukanya Samriddhi Yojana will be suspended if Aadhaar is not submittedPPFSenior Citizen Savings SchemeSukanya Samriddhi YojanasuspendedVIJAYAPRABHA.COMಆಧಾರ್ ಸಂಖ್ಯೆಪೋಸ್ಟ್ ಆಫೀಸ್ಬ್ಯಾಂಕ್ ಶಾಖೆರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಸಾರ್ವಜನಿಕ ಭವಿಷ್ಯ ನಿಧಿಸುಕನ್ಯಾ ಸಮೃದ್ಧಿ ಯೋಜನೆಹಿರಿಯ ನಾಗರಿಕ ಉಳಿತಾಯ ಯೋಜನೆ
Post Office

ಸಾರ್ವಜನಿಕ ಭವಿಷ್ಯ ನಿಧಿ(PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC), ಹಿರಿಯ ನಾಗರಿಕ ಉಳಿತಾಯ ಯೋಜನೆ (Senior Citizen Savings Scheme) ಸೇರಿದಂತೆ ಇತರ ಅಂಚೆ ಕಚೇರಿ ಯೋಜನೆಗಳಲ್ಲಿ ನೀವು ಹೂಡಿಕೆ ಮಾಡುತ್ತಿದ್ದೀರಾ? ನೀವು ಆ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ,ನಿಮ್ಮ ಆಧಾರ್ ಸಂಖ್ಯೆಯನ್ನು(Aadhar Card) ಪೋಸ್ಟ್ ಆಫೀಸ್ (Post office) ಅಥವಾ ಖಾತೆಯು ಆಯಾ ಯೋಜನೆಗಳಿಗೆ ಸಂಬಂಧಿಸಿದ ಬ್ಯಾಂಕ್ ಶಾಖೆಯಲ್ಲಿ ಸಲ್ಲಿಸಬೇಕು. ಆಧಾರ್ ಸಂಖ್ಯೆಯನ್ನು ಒದಗಿಸದ ಖಾತೆಗಳನ್ನು ಅಮಾನತುಗೊಳಿಸಲಾಗುತ್ತದೆ.

ಇದನ್ನು ಓದಿ: Airtel ಬಳಕೆದಾರರಿಗೆ ಒಳ್ಳೆಯ ಸುದ್ದಿ; ರೂ100 ಕ್ಯಾಶ್‌ಬ್ಯಾಕ್ ಸೇರಿದಂತೆ Disney Hotstar, Wink Music ಉಚಿತ

ನೀವು ಆಧಾರ್ ಸಂಖ್ಯೆಯನ್ನು(Aadhar card) ಒದಗಿಸುವವರೆಗೆ ನಿಮ್ಮ ಸಣ್ಣ ಉಳಿತಾಯ ಯೋಜನೆಗಳ ಖಾತೆಗಳನ್ನು ಫ್ರೀಜ್ ಮಾಡಲಾಗುತ್ತದೆ. ಹಣ ಜಮಾ ಮಾಡುವುದು ಮತ್ತು ಹಿಂಪಡೆಯುವುದು ಅದರಲ್ಲಿ ನಡೆಯುವುದಿಲ್ಲ. ಹಾಗಾಗಿ ಕೂಡಲೇ ನಿಮ್ಮ ಆಧಾರ್ ಸಂಖ್ಯೆಯನ್ನು ಸಲ್ಲಿಸಿ. ನೀವು ಆಧಾರ್ ಸಂಖ್ಯೆಯನ್ನು ಒದಗಿಸಲು ಗಡುವು ಸೆಪ್ಟೆಂಬರ್ 30, 2023 ರವರೆಗೆ ಇರುತ್ತದೆ. ಇನ್ನೂ ಸಮಯವಿದೆ ಎಂದು ಮರೆತರೆ ಬಾರಿ ಬೆಲೆ ತೆರಬೇಕಾಗುತ್ತದೆ.

Vijayaprabha Mobile App free

ಇದನ್ನು ಓದಿ: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್; ಬರೋಬ್ಬರಿ 1,30,000 ಹುದ್ದೆಗಳ ಭರ್ತಿಗೆ ಅಧಿಸೂಚನೆ!

ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವವರು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯ ಈಗಾಗಲೇ ಘೋಷಿಸಿದೆ. ಅಸ್ತಿತ್ವದಲ್ಲಿರುವ ಸಣ್ಣ ಉಳಿತಾಯ ಯೋಜನೆಗೆ ಆಧಾರ್ ಲಿಂಕ್ ಮಾಡಬೇಕು ಎಂದು ಮಾರ್ಚ್ 31, 2023 ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಈಗಾಗಲೇ ಖಾತೆಯನ್ನು ತೆರೆದಿರುವ ಠೇವಣಿದಾರರು ಇಲ್ಲಿಯವರೆಗೆ ಆಧಾರ್ ಸಂಖ್ಯೆಯನ್ನು ಒದಗಿಸದಿದ್ದರೆ, ಅವರು ಅದನ್ನು ಏಪ್ರಿಲ್ 1, 2023 ರಿಂದ ಆರು ತಿಂಗಳೊಳಗೆ ಸಲ್ಲಿಸಬೇಕಾಗುತ್ತದೆ. ಸೆಪ್ಟೆಂಬರ್ 30, 2023 ರಂದು ಆರು ತಿಂಗಳ ಅವಧಿಗೆ ಮುಕ್ತಾಯವಾಗುತ್ತದೆ. ಸಣ್ಣ ಮೊತ್ತದ ಉಳಿತಾಯ ಯೋಜನೆಗಳಿಗೆ ಪ್ಯಾನ್, ಆಧಾರ್ ಸಂಖ್ಯೆ ಕಡ್ಡಾಯವಾಗಿದೆ.’ ಎಂದು ಕೇಂದ್ರ ಹಣಕಾಸು ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿ, ದೇಶದಾತ್ಯಂತ ಹೊಸ ನಿಯಮ ಜಾರಿ!

ಸೆಪ್ಟೆಂಬರ್ 30, 2023 ರೊಳಗೆ ಆರು ತಿಂಗಳೊಳಗೆ ಅಂಚೆ ಕಚೇರಿ ಅಥವಾ ಬ್ಯಾಂಕ್ ಶಾಖೆಯಲ್ಲಿ ಆಧಾರ್ ಸಂಖ್ಯೆಯನ್ನು ನೀಡದಿದ್ದರೆ, ಈ ಸಣ್ಣ ಉಳಿತಾಯ ಯೋಜನೆಗಳ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಅದರ ನಂತರ ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

ಹೌದು, ಸಣ್ಣ ಉಳಿತಾಯ ಖಾತೆಯೊಂದಿಗೆ ಹೂಡಿಕೆದಾರರ ಬ್ಯಾಂಕ್ ಖಾತೆಗೆ ಬಡ್ಡಿಯನ್ನು ಜಮಾ ಮಾಡಲಾಗುವುದಿಲ್ಲ. ಇದು ಗಂಭೀರ ನಷ್ಟಕ್ಕೆ ಕಾರಣವಾಗುತ್ತದೆ.

ಆಧಾರ್ ಸಂಖ್ಯೆಯನ್ನು ಒದಗಿಸದ ಹೊರತು ಖಾತೆದಾರರು ತಮ್ಮ ಖಾತೆಗಳಿಗೆ PPF ಅಥವಾ ಸುಕನ್ಯಾ ಸಮೃದ್ಧಿ ಯೋಜನೆಗೆ (Sukanya Samriddhi Yojana) ಹಣವನ್ನು ಜಮಾ ಮಾಡಲು ಸಾಧ್ಯವಿಲ್ಲ.

ಮತ್ತೊಂದೆಡೆ.. ಉಳಿತಾಯ ಖಾತೆ ಹೊಂದಿರುವ ಹೂಡಿಕೆದಾರರ ಬ್ಯಾಂಕ್ ಖಾತೆಗೆ ಮೆಚ್ಯೂರಿಟಿ ನಗದು ಕೂಡ ಜಮಾ ಆಗುವುದಿಲ್ಲ. ಇದರಿಂದ ಬ್ಯಾಂಕ್‌ ಸುತ್ತಾಡಬೇಕಾಗಿದೆ.

ಇದನ್ನು ಓದಿ: EPFO​​ನಲ್ಲಿ 2859 ಹುದ್ದೆಗಳಿಗೆ ಬಂಪರ್ ನೇಮಕಾತಿ: ಪಿಯುಸಿ, ಪದವಿ ವಿದ್ಯಾರ್ಹತೆ, ಇಂದೇ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

ಶುಭ ಕಾರ್ಯಗಳಲ್ಲಿ ಮಾವಿನ ಸೊಪ್ಪಿನ ತೋರಣವನ್ನು ಏಕೆ ಬಳಸುತ್ತಾರೆ

By Vijayaprabha October 21, 2025
#ट्रेंडिंग हैशटैग:Aadhar cardfeaturedinvestmentsNSCPost OfficePost office investments like ppf NSC Sukanya Samriddhi Yojana will be suspended if Aadhaar is not submittedPPFSenior Citizen Savings SchemeSukanya Samriddhi YojanasuspendedVIJAYAPRABHA.COMಆಧಾರ್ ಸಂಖ್ಯೆಪೋಸ್ಟ್ ಆಫೀಸ್ಬ್ಯಾಂಕ್ ಶಾಖೆರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಸಾರ್ವಜನಿಕ ಭವಿಷ್ಯ ನಿಧಿಸುಕನ್ಯಾ ಸಮೃದ್ಧಿ ಯೋಜನೆಹಿರಿಯ ನಾಗರಿಕ ಉಳಿತಾಯ ಯೋಜನೆ

Post navigation

Previous Previous post: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ
Next Next post: ರೇಷನ್‌ ಕಾರ್ಡ್‌ ಇದ್ದವರಿಗೆ ಹೊಸ ರೂಲ್ಸ್‌; ಜೂನ್‌ 30 ರೊಳಗೆ ತಪ್ಪದೇ ಈ ಕೆಲಸ ಮಾಡಿ, ಇಲ್ಲದಿದ್ದರೆ ನಿಮ್ಮ ರೇಷನ್‌ ಕಡಿತ ಪಕ್ಕಾ.!

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By