Channapatna constituency : ರಾಮನಗರ ಜಿಲ್ಲೆಯ ಪ್ರಮುಖ ತಾಲೂಕು ಚನ್ನಪಟ್ಟಣ. ಈ ವಿಧಾನಸಭಾ ಕ್ಷೇತ್ರ ಐತಿಹಾಸಿಕ & ರಾಜಕೀಯವಾಗಿ ಬಹಳ ಮಹತ್ವ ಪಡೆದುಕೊ೦ಡಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಗುರುತಿಸಿಕೊಂಡಿದ್ದು, ಈ ಕ್ಷೇತ್ರದಿಂದ ಆಯ್ಕೆಯಾದ ಹೆಚ್‌ಡಿಕೆ ಮತ್ತು ಕೆಂಗಲ್ ಹನುಮ೦ತಯ್ಯ ಸಿಎಂ ಆಗಿದ್ದರು.
Channapatna constituency ರಾಜಕೀಯ ಇತಿಹಾಸ
ಚನ್ನಪಟ್ಟಣ ಕ್ಷೇತ್ರದ ಮೊದಲ ಶಾಸಕ ವಿ. ವೆಂಕಟಪ್ಪ. 1957ರಲ್ಲಿ ಪ್ರಜಾ ಸೋಶಿಯಲಿಸ್ಟ್ ಪಕ್ಷದ ಬಿ.ಕೆ. ಪುಟ್ಟರಾಮಯ್ಯ, 1962ರಲ್ಲಿ ಕಾಂಗ್ರೆಸ್‌ನ ಬಿ.ಜೆ. ಲಿಂಗೇಗೌಡ, 1967-1972 ರಲ್ಲಿ ಸ್ವತಂತ್ರ ಅಭ್ಯರ್ಥಿ ಟಿ.ವಿ. ಕೃಷ್ಣಪ್ಪ, 1978 ಕಾಂಗ್ರೆಸ್‌ನ ಡಿ.ಟಿ. ರಾಮು, 1983-1985ರಲ್ಲಿ ಜನತಾ ಪಕ್ಷದ ಎಂ. ವರದೇಗೌಡ, 1989 ಕಾಂಗ್ರೆಸ್‌ನ ಸಾದತ್ ಅಲಿ ಖಾನ್, 1994ರ ಚುನಾವಣೆಯಲ್ಲಿ ಜೆಡಿಎಸ್‌ನ ಎಂ.ವರದೇಗೌಡ ಇಲ್ಲಿಂದ ಆಯ್ಕೆಯಾಗಿದ್ದರು
ಇದನ್ನೂ ಓದಿ: Shiggaon constituency | ಉಪ ಚುನಾವಣೆ ರೋಚಕ ರಾಜಕೀಯ ಇತಿಹಾಸ ಹೊಂದಿರುವ ಶಿಗ್ಗಾವಿ ಕ್ಷೇತ್ರ…!
Channapatna constituency ಕ್ಷೇತ್ರದ ಜನಪ್ರಿಯ ನಾಯಕ
ಕಾಂಗ್ರೆಸ್ ಹಿಡಿತದಲ್ಲಿದ್ದ ಈ ಕ್ಷೇತ್ರದ ರಾಜಕೀಯ ಸ್ವರೂಪ ಬದಲಿಸಿದ್ದು ಯೋಗೇಶ್ವರ್. 1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು. 5 ಬಾರಿ ಶಾಸಕರಾಗಿ, ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿರುವ ಜನಪ್ರಿಯ ನಾಯಕ. ಯೋಗೇಶ್ವರ್ ಅವರು 2009, 2011 ಹಾಗು 2013ರ ಚುನಾವಣೆಗಳಲ್ಲಿ ಕ್ರಮವಾಗಿ ಬಿಜೆಪಿ, ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದು ವಿಜಯ ಪತಾಕೆ ಹಾರಿಸಿದರು.
3ನೇ ಬಾರಿ ಸ್ಪರ್ಧೆಗೆ ನಿಖಿಲ್
ನಿಖಿಲ್ ಕುಮಾರಸ್ವಾಮಿ 2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ, 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಈಗ 3ನೇ ಬಾರಿಗೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ದಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ನಿಖಿಲ್ ಕುಮಾರಸ್ವಾಮಿ ಒಕ್ಕಲಿಗ ಸಮುದಾಯದ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಈ ಬಾರಿ ಜಯಭೇರಿ ಬಾರಿಸುತ್ತಾರಾ ಕಾದುನೋಡಬೇಕು.
ಇದನ್ನೂ ಓದಿ: Gold price | ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ; ಚಿನ್ನ, ಬೆಳ್ಳಿ ಬೆಲೆ ಮತ್ತೆ ಇಳಿಕೆ
ಜೆಡಿಎಸ್ ರಾಜಕೀಯ ಬಲ
ನಾಲ್ಕು ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ರಾಮನಗರ ಜಿಲ್ಲೆಯಲ್ಲಿ 2 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಎಚ್‌ಡಿಕೆ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ತನ್ನದೇ ಆದ ರಾಜಕೀಯ ಬಲ ಹೊಂದಿದೆ.
ಜಾತಿವಾರು ಲೆಕ್ಕಾಚಾರ
ಚನ್ನಪಟ್ಟಣ ಕ್ಷೇತ್ರ ಒಟ್ಟು 2,17,573 ಮತದಾರರನ್ನು ಹೊ೦ದಿದೆ. ಈ ಪೈಕಿ 1,06,535 ಪುರುಷರು, 1,11,029 ಮಹಿಳಾ ಮತದಾರರಿದ್ದರೆ ಇತರೆ ವರ್ಗದಲ್ಲಿ 9 ಜನ ಮತದಾರರ ಹೆಸರು ದಾಖಲಾಗಿದೆ. ಒಕ್ಕಲಿಗ ಮತದಾರರ ಬಲ ಹೊ೦ದಿರುವ ಈ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು 2ನೇ ಸ್ಥಾನದಲ್ಲಿದ್ದರೆ, ದಲಿತರು 3ನೇ ಸ್ಥಾನದಲ್ಲಿದ್ದು ನಿರ್ಣಾಯಕವಾಗಿವೆ.