ಹಾಸನ: ಹಾಸನ ಬಳಿ ಇಂದು ಛಟ್ಟಿ ಅಮವಾಸ್ಯೆಯ ರಾತ್ರಿ ಥೇಟ್ ಸಿನಿಮಾದಲ್ಲಿ ಆದಂತೆ ಭಯ ಭೀಕರ ಅಪಘಾತವೊಂದು ಸಂಭವಿಸಿದ್ದು, ಪೊಲೀಸ್ ವಾಹನ ಸಿಡಿದು ಹೋಗಿದೆ.
ಪೊಲೀಸ್ ಜೀಪ್ ಸಿಡಿದು ಬಿದ್ದ ರಭಸಕ್ಕೆ ಆ ವಾಹನ ಸಂಪೂರ್ಣ ನುಜ್ಜು – ಗುಜ್ಜಾಗಿದೆ. ಜೀಪ್ ನಲ್ಲಿ ಇದ್ದ ಒಬ್ಬ ಪೋಲಿಸ್ ಅಧಿಕಾರಿ ಮಧ್ಯಪ್ರದೇಶದ ಹರ್ಷವರ್ಧನ್ ಮೃತಪಟ್ಟಿದ್ದು, ಮತ್ತೊಬ್ಬ ಸಿಬ್ಬಂದಿ ಗಂಭೀರ ಸ್ವರೂಪದ ಗಾಯಗೊಂಡಿದ್ದಾರೆ.
KA-13, G-1386 ನೋಂದಣಿ ಇರುವ ಪೊಲೀಸ್ ಜೀಪ್ ಸಿಡಿದು ಭೀಕರ ಅವಘಡ ಉಂಟಾಗಿದ್ದು, ಚಲಿಸುತ್ತಿದ್ದ ಜೀಪ್ ಇದ್ದಕ್ಕಿದ್ದಂತೆ ಹೀಗೆ ಸಿಡಿಯಲು ಮೇಲ್ನೋಟಕ್ಕೆ ಟೈರ್ ಸ್ಫೋಟವೇ ಕಾರಣ ಎನ್ನಲಾಗುತ್ತಿದೆ. ಆದರೆ, ನಿಖರ ಕಾರಣ ಏನೆಂಬುದು ಇನ್ನೂ ತಿಳಿದು ಬಂದಿಲ್ಲ.
ಅಧಿಕಾರಿ ಮೃತ ಮಧ್ಯಪ್ರದೇಶದ ಹರ್ಷವರ್ಧನ್ ಸಾವು
ಈ ಅವಘಡದಲ್ಲಿ ಪ್ರೊಬೇಷನರಿ ಹುದ್ದೆಯಲ್ಲಿದ್ದ ಪೊಲೀಸ್ ಅಧಿಕಾರಿಮ ಧ್ಯಪ್ರದೇಶದ ಹರ್ಷವರ್ಧನ್ ದುರಂತ ಸಾವಿಗೀಡಾಗಿದ್ದು, ಮತ್ತೊಬ್ಬ ಸಿಬ್ಬಂದಿ ತೀವ್ರ ಸ್ವರೂಪದ ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಧಿಕಾರಿ ಹರ್ಷವರ್ಧನ್ ತಲೆಗೆ ತೀವ್ರತರವಾದ ಗಾಯವಾಗಿ, ರಕ್ತದ ಮಡುವಿನಲ್ಲಿ ಮುಳುಗಿದ್ದ ದೃಶ್ಯ ಕಂಡು ಬಂತು. ಇನ್ನು, ಮತ್ತೊಬ್ಬ ಸಿಬ್ಬಂದಿಯೂ ತೀವ್ರ ಗಾಯಗೊಂಡಿದ್ದಾರೆ.
ಪೊಲೀಸ್ ಜೀಪ್ ಸಿಡಿದ ರಭಸಕ್ಕೆ ಅದರ ಡೋರ್ ಕಿತ್ತು ದೂರದಲ್ಲಿ ಬಿದ್ದಿವೆ. ಬಹುತೇಕ ಟೈರ್ ಸಿಡಿದು ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
ತಂದೆ ಅಖಿಲೇಶ್ ಎಸ್ ಡಿ ಎಂ ( ಎಸಿ ಕೇಡರ್ ಅಧಿಕಾರಿ) ಮೂಲತಃ ಬಿಹಾರದವರು. ಬಿಇ ಸಿವಿಲ್ ಇಂಜಿನಿಯರಿಂಗ್ ಓದಿಕೊಂಡಿದ್ದ ಹರ್ಷ 2023 ರ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದರು. ಮೈಸೂರು ಪೊಲೀಸ್ ತರಬೇತಿ ಕೇಂದ್ರದಲ್ಲಿ ನಾಲ್ಕುವಾರ ತರಬೇತಿ ಪೂರ್ಣಗೊಳಿಸಿದ್ದರು. ಆರು ತಿಂಗಳು ಹಾಸನದಲ್ಲಿ ಡಿಸ್ಟ್ರಿಕ್ಟ್ ಪ್ರಾಕ್ಟಿಕಲ್ ಟ್ರೈನಿಂಗ್ ಪಡೆಯಲಿದ್ದರು.