PM Kisan : ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿ ರೈತರ ಖಾತೆಗೆ ಹಣ ನೀಡುತ್ತಿದ್ದು, ಈಗಾಗಲೇ ಯೋಜನೆಯ 18ನೇ ಕಂತಿನ ಹಣ ರೈತರ ಖಾತೆಗಳಿಗೆ ಜಮಾ ಆಗಿದೆ. ಇದೀಗ ಹೊಸ ವರ್ಷದ ಆರಂಭದಲ್ಲಿ 19ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸಿದ್ಧತೆ ನಡೆಸುತ್ತಿದೆ.
ಹೌದು, ಮುಂದಿನ ತಿಂಗಳು ಜನವರಿ ತಿಂಗಳ ಮೊದಲ ಅಥವಾ 2ನೇ ವಾರದಲ್ಲಿ 19ನೇ ಕಂತಿನ ಹಣ ಜಮೆಯಾಗುವ ಸಾಧ್ಯತೆ ಇದೆ. ಇನ್ನು 18ನೇ ಕಂತಿನ ಹಣ ಪಾವತಿಯಾಗದ ರೈತರಿಗೂ ಕೂಡ ಎರಡೂ ಕಂತಿನ ಹಣ ಒಟ್ಟಿಗೆ ಜಮೆ ಆಗಲಿದೆ.
ಇದನ್ನೂ ಓದಿ: PM Kisan ಯೋಜನೆಯ 19ನೇ ಕಂತಿನ ಕುರಿತು ಮಹತ್ವದ ಮಾಹಿತಿ; ₹2000 ಪಡೆಯಬೇಕಾದರೆ ಈ ಕೆಲಸ ಮಾಡಲೇಬೇಕು!
PM Kisan : 19 ನೇ ಕಂತಿನ ಹಣ ಬೇಕಾದ್ರೆ ಈ ಕೆಲಸ ಮಾಡಿ
PM ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಾಗಿರುವ ರೈತರಿಗೆ ಕೇಂದ್ರದಿಂದ ಮಹತ್ವದ ಮಾಹಿತಿ ನೀಡಲಾಗಿದೆ. ಈಗ, ನೀವು PM ಕಿಸಾನ್ ಯೋಜನೆಯ 19ನೇ ಕಂತಿನ 2000 ರೂ. ಹಣ ಪಡೆಯಲು ಈ ನಿಯಮಗಳನ್ನು ಪಾಲಿಸಲೇಬೇಕು.
ಹೌದು, ಇನ್ನು ಮುಂದೆ ರೈತ ನೋಂದಣಿಯಲ್ಲಿ ನೋಂದಾಯಿಸಿಕೊಂಡ ರೈತರಿಗೆ ಮಾತ್ರ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಲಾಭ ಸಿಗಲಿದೆ. ಕೇಂದ್ರ ಸರ್ಕಾರವು ಡಿಸೆಂಬರ್ 31 ರ ನಂತರ ಬಿಡುಗಡೆಯಾದ ಕಂತುಗಳಿಗೆ ರೈತ ನೋಂದಣಿಯನ್ನು ಕಡ್ಡಾಯಗೊಳಿಸಿದೆ. ಈ ನೋಂದಣಿಗೆ ಸೇರಿದ ನಂತರ, ರೈತರು ಈ ಯೋಜನೆಯ ಮತ್ತು ಇತರ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಾರೆ.
ಇದನ್ನೂ ಓದಿ: PM Kisan ಹಣ ಬಂದಿಲ್ಲವೇ? ಲಿಸ್ಟ್‌ನಲ್ಲಿ ನಿಮ್ಮ ಹೆಸರು ಚೆಕ್ ಮಾಡಿ; ಮುಂದಿನ ಕಂತಿನ ಹಣಕ್ಕಾಗಿ ಈ ಕೆಲಸ ಮಾಡಲೇಬೇಕು!