ಅನ್ನದಾತರಿಗೆ ಪ್ರಮುಖ ಎಚ್ಚರಿಕೆ. ಪಿಎಂ ಕಿಸಾನ್ ಯೋಜನೆಯಡಿ 2,000 ರೂ ಪಡೆಯುವ ರೈತರು ನಕಲಿ ದಾಖಲೆಗಳ ಬಗ್ಗೆ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಜೈಲಿಗೆ ಕೂಡ ಹೋಗಬೇಕಾಗಬಹುದು.
ಕೇಂದ್ರ ಸರ್ಕಾರ ಅನೇಕ ರೀತಿಯ ಯೋಜನೆಗಳನ್ನು ನೀಡುತ್ತಿದ್ದು, ಇದರಲ್ಲಿ ರೈತರಿಗಾಗಿ ಕೂಡ ಕೆಲವು ಯೋಜನೆಗಳೂ ಸೇರಿವೆ. ಅನ್ನದಾತರಿಗೆ ನೀಡುವ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಪಿಎಂ ಕಿಸಾನ್ ಯೋಜನೆ. ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರವು ಈ ಯೋಜನೆಯನ್ನು ಪ್ರಾರಂಭಿಸಿದೆ.
ಪಿಎಂ ಕಿಸಾನ್ ಯೋಜನೆಯಡಿ ಮೋದಿ ಸರ್ಕಾರ ರೈತರಿಗೆ ವಾರ್ಷಿಕವಾಗಿ 6,000 ರೂ. ನೀಡುತ್ತಿದೆ. ಆದರೆ, ಈ ಹಣವು ಒಂದೇ ಬಾರಿಗೆ ಅಲ್ಲದೆ ಕಂತುಗಳಲ್ಲಿ ಅನ್ನದಾತರ ಖಾತೆಗೆ ಜಮಾ ಆಗುತ್ತದೆ. ಮೂರು ಕಂತುಗಳಲ್ಲಿ 2000 ರೂಗಳ ಹಣ ಸಿಗುತ್ತದೆ.
ಹೀಗಾಗಿ, ಪಿಎಂ ಕಿಸಾನ್ ಯೋಜನೆಯಡಿ ಹಣ ಪಡೆಯುವ ರೈತರು ನಕಲಿ ದಾಖಲೆಗಳ ಮೂಲಕ ಹಣ ಪಡೆದರೆ ಮಾತ್ರ ತೊಂದರೆಗೆ ಸಿಲುಕಬೇಕಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ ಬಹಳ ಗಂಭೀರವಾಗಿದ್ದು, ಈ ರೀತಿ ಮಾಡಿದರೆ ನೀವು ಜೈಲಿಗೆ ಹೋಗಬೇಕಾಗುತ್ತದೆ ಎಂಬುದನ್ನು ನೆನಪಿಡಿ.
ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲು ಮೋದಿ ಸರ್ಕಾರ ಬಯಸಿದ್ದು, ಇದು ಈ ತಿಂಗಳ ಕೊನೆಯಲ್ಲಿ ಮುಕ್ತಾಯಗೊಳ್ಳುತ್ತದೆ. ಇದರೊಂದಿಗೆ, ಪ್ಯಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಅದನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕಾಗುತ್ತದೆ. ಈಗೆ ಪ್ಯಾನ್ ಆಧಾರ್ ಲಿಂಕ್ ಮೂಲಕ ನಕಲಿ ದಾಖಲೆಗಳನ್ನು ಹಾಕಿದವರನ್ನು ಸುಲಭವಾಗಿ ಕಂಡುಹಿಡಿಯಬಹುದು. ಆದ್ದರಿಂದ ಜಾಗರೂಕರಾಗಿರಿ.