PM Kisan: ದೇಶದಲ್ಲಿ ಚುನಾವಣಾ ಅಬ್ಬರ ಶುರುವಾಗಿದೆ. ಈ ವರ್ಷ ನವೆಂಬರ್‌ನಲ್ಲಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಇದೆ. ಇದಾದ ಬಳಿಕ ಇನ್ನೇನು ಕೆಲವೇ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿರುವಂತಿದೆ.
ಇದನ್ನೂ ಓದಿ: ಶುಕ್ಲ ಯೋಗ, ಬ್ರಹ್ಮ ಯೋಗದಿಂದ ಇಂದು ಈ ರಾಶಿಯವರಿಗೆ ಅತ್ಯುತ್ತಮ ಆರ್ಥಿಕ ಲಾಭ
PM Kisan: ಪಿಎಂ ಕಿಸಾನ್ ನೆರವು ರೂ 8000ಕ್ಕೆ ಏರಿಕೆ…!?
ಹೌದು, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುತ್ತಿರುವುದು ಎಲ್ಲರಿಗು ಗೊತ್ತಿದೆ. ಇದೀಗ ಈ ನೆರವನ್ನು ಇನ್ನಷ್ಟು ಹೆಚ್ಚಿಸಲು ಮೋದಿ ಸರ್ಕಾರ ಮುಂದಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರಸ್ತುತ ಪಿಎಂ ಕಿಸಾನ್ ಯೋಜನೆಯ ಮೂಲಕ ದೇಶದ ರೈತರಿಗೆ ವಾರ್ಷಿಕ ರೂ. 6,000 ಕೇಂದ್ರದಿಂದ ನೀಡಲಾಗುತ್ತಿದೆ. ಈಗ ಇದರ ಮೂರನೇ ಒಂದು ಭಾಗವನ್ನು ಅಂದರೆ ರೂ. 8000 ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಇದನ್ನೂ ಓದಿ: ರೇಷನ್ ಕಾರ್ಡ್ Status ಮೊಬೈಲ್‌ನಲ್ಲೇ ಚೆಕ್ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ
PM Kisan: ಸರ್ಕಾರಕ್ಕೆ ರೂ.20 ಸಾವಿರ ಕೋಟಿ ಹೊರೆ
2024 ರ ಆರ್ಥಿಕ ವರ್ಷಕ್ಕೆ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಮೋದಿ ಸರ್ಕಾರವು 2023-24ರ ವಾರ್ಷಿಕ ಬಜೆಟ್‌ನಲ್ಲಿ 60,000 ಕೋಟಿ ರೂ ಮೀಸಲಿಟ್ಟಿದೆ. ಆದರೆ ಇತ್ತೀಚಿನ ನಿರ್ಧಾರದಿಂದ ಸರ್ಕಾರಕ್ಕೆ ಇನ್ನೂ ರೂ.20 ಸಾವಿರ ಕೋಟಿ ಹೊರೆಯಾಗಲಿದೆ. ಇದರೊಂದಿಗೆ ಒಟ್ಟು ರೂ. 80,000 ಕೋಟಿ ಖರ್ಚು ಮಾಡಬೇಕಾಗುತ್ತದೆ. ಈ ಬಗ್ಗೆ ಪ್ರತಿಕ್ರಿಯಿಸಲು ಹಣಕಾಸು ಇಲಾಖೆಯ ವಕ್ತಾರರು ನಿರಾಕರಿಸಿದ್ದಾರೆ. ಆದರೆ, ಸಂಬಂಧಪಟ್ಟವರು ಮಾತ್ರ ನೆರವು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದು ಗಮನಾರ್ಹ.
ಇದನ್ನೂ ಓದಿ: ಸರ್ಕಾರಿ ನೌಕರರ ಕನಿಷ್ಠ ವೇತನ 26 ಸಾವಿರ ರೂ.ಗೆ ಏರಿಕೆ; ಶೀಘ್ರದಲ್ಲೇ ಅಧಿಸೂಚನೆ..!
ದೇಶದ ಒಟ್ಟು ಜನಸಂಖ್ಯೆ 140 ಕೋಟಿ ಇದ್ದು, ಇದರಲ್ಲಿ 65ರಷ್ಟು ಮಂದಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರುವ ನಿರೀಕ್ಷೆಯಲ್ಲಿರುವ ಮೋದಿ ಸರಕಾರ ರೈತರನ್ನು ಪ್ರಮುಖ ಮತಬ್ಯಾಂಕ್ ಎಂದು ಪರಿಗಣಿಸಿದೆ. 55ರಷ್ಟು ಜನ ಬೆಂಬಲವಿರುವ ನರೇಂದ್ರ ಮೋದಿ ಅತ್ಯಂತ ಜನಪ್ರಿಯ ನಾಯಕರಾಗಿದ್ದರೂ ಚುನಾವಣೆ ಬಂದಾಗ ನಿರುದ್ಯೋಗ, ಅಸಮಾನತೆಯಂತಹ ಸಮಸ್ಯೆಗಳು ಅಡ್ಡಿಯಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ರೈತರನ್ನು ತಮ್ಮತ್ತ ತಿರುಗಿಸುವ ಉದ್ದೇಶದಿಂದ ಮಹತ್ವದ ಘೋಷಣೆ ಮಾಡುವ ಸೂಚನೆಗಳಿವೆ.
ಇದನ್ನೂ ಓದಿ: ತರಕಾರಿ ನರ್ಸರಿ ವ್ಯಾಪಾರದಿಂದ ಲಾಭವೇ ಲಾಭ!
ಹಣದುಬ್ಬರ ನಿಯಂತ್ರಣಕ್ಕೆ ಕೇಂದ್ರವು ಅಕ್ಕಿ ರಫ್ತು ನಿಷೇಧದಂತಹ ಕ್ರಮಗಳನ್ನು ಕೈಗೊಂಡಿದೆ. ಆ ನಂತರ ಸರ್ಕಾರ ರೈತರ ಆದಾಯ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ದೇಶದಲ್ಲಿ ಈ ವರ್ಷ ಅತ್ಯಂತ ದುರ್ಬಲ ಮುಂಗಾರು ಮಳೆಯಾಗಿದೆ. ಈ ವರ್ಷ ಪ್ರಮುಖ ಬೆಳೆಗಳಿಗೆ ಹಾನಿಯಾಗಿದೆ. ಡಿಸೆಂಬರ್ 2018 ರಲ್ಲಿ ಸಬ್ಸಿಡಿ ಕಾರ್ಯಕ್ರಮವನ್ನು ಪ್ರಾರಂಭಿಸಿದ ನಂತರ, ಕೇಂದ್ರವು 11 ಕೋಟಿ ಫಲಾನುಭವಿಗಳಿಗೆ ಒಟ್ಟು ರೂ. 2.42 ಲಕ್ಷ ಕೋಟಿ ನೀಡಲಾಗಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |