PM Dhan Dhanya Krishi Yojana | ‘ಧನ್ ಧಾನ್ಯ ಕೃಷಿ ಯೋಜನೆ’ ಅಡಿ, ದೇಶದ 100 ಹಿಂದುಳಿದ ಜಿಲ್ಲೆಗಳಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸಲು, ನೀರಾವರಿ, ಸಂಗ್ರಹಣೆ, ಸಾಲ ಸೌಲಭ್ಯ ಮತ್ತು ಮಾರುಕಟ್ಟೆ ಸಂಪರ್ಕವನ್ನು ಸುಧಾರಿಸಲು ಹಲವು ಯೋಜನೆಗಳು ರೂಪಿಸಲ್ಪಟ್ಟಿವೆ.
ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯೂ ಸರ್ಕಾರ ಹೊಂದಿದೆ. ಪಶುಸಂಗೋಪನೆ, ಮೀನುಗಾರಿಕೆ, ಆಹಾರ ಸಂಸ್ಕರಣಾ ಘಟಕಗಳು ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಾಗುತ್ತದೆ ಎಂದು ಕೇಂದ್ರ ತಿಳಿಸಿದೆ.
ರಾಜ್ಯದ ಈ 6 ಜಿಲ್ಲೆಗಳಲ್ಲಿ PM ಧನಧಾನ್ಯ ಸ್ಕೀಮ್ ಜಾರಿ
ಕರ್ನಾಟಕದ 6 ಸೇರಿದಂತೆ 100 ಜಿಲ್ಲೆಗಳಲ್ಲಿ ಕೃಷಿ ಉತ್ತೇಜನ & ಕಾಳು ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸುವ 35,440 ಕೋಟಿ ವೆಚ್ಚದ 2 ಮಹತ್ವಕಾಂಕ್ಷಿ ಯೋಜನೆಗಳಿಗೆ ಪ್ರಧಾನಿ ಮೋದಿ ನಿನ್ನೆ ಚಾಲನೆ ನೀಡಿದ್ದಾರೆ.
ಇದೇ ವೇಳೆ ದೇಶೀಯ & ಜಾಗತಿಕ ಬೇಡಿಕೆಗೆ ಅನುಗುಣವಾಗಿ ಉತ್ಪಾದಕತೆ ಹೆಚ್ಚಿಸುವಂತೆ ದೇಶದ ರೈತಾಪಿ ಸಮುದಾಯಕ್ಕೆ ಪ್ರಧಾನಿ ಕರೆ ನೀಡಿದ್ದಾರೆ. ರಾಜ್ಯದ ಹಾವೇರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಕೊಪ್ಪಳ & ಗದಗ ಜಿಲ್ಲೆಗಳಲ್ಲಿ PM ಧನಧಾನ್ಯ ಸ್ಟೀಮ್ ಜಾರಿಯಾಗಿದೆ.
ಏನಿದು PM ಧನ ಧಾನ್ಯ ಯೋಜನೆ?
ಕೃಷಿ ಉತ್ಪಾದನೆಯಲ್ಲಿ ಹಿಂದುಳಿದಿರುವ ವಿವಿಧ ರಾಜ್ಯಗಳ 100 ಮಹತ್ವಾಕಾಂಕ್ಷಿ ಜಿಲ್ಲೆಗಳನ್ನು ಗುರುತಿಸಿ ಅಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸುವ, ಕೃಷಿ ವೈವಿಧ್ಯಕರಣಕ್ಕೆ ಒತ್ತು ನೀಡುವ, ನೀರಾವರಿ ಸವಲತ್ತು ಹೆಚ್ಚಿಸುವ, ಸಂಗ್ರಹಾಗಾರಗಳನ್ನು ಅಭಿವೃದ್ಧಿಪಡಿಸುವ ಮತ್ತು ಆಯ್ದ ಜಿಲ್ಲೆಗಳಲ್ಲಿ ಸಾಲ ಖಾತರಿಪಡಿಸುವ ಅಂಶಗಳನ್ನು ಧನ ಧಾನ್ಯ ಯೋಜನೆ ಹೊಂದಿದೆ.




