ಹೈದರಾಬಾದ್: ಆನ್ಲೈನ್ ಫುಡ್ ಡೆಲಿವರಿ ಆ್ಯಪ್ ಮೂಲಕ ನಗರದ ಬಡಂಗ್ಪೇಟ್ನಲ್ಲಿರುವ ಅರೋಮಾ ರೆಸ್ಟೋರೆಂಟ್ನಿಂದ ಆರ್ಡರ್ ಮಾಡಿದ ಬಿರಿಯಾನಿ ಮತ್ತು ಗ್ರಿಲ್ಡ್ ಚಿಕನ್ ಸೇವಿಸಿದ ಮೂವರು ಯುವಕರು ಅಸ್ವಸ್ಥರಾಗಿದ್ದಾರೆ.
ಗ್ರಿಲ್ಡ್ ಚಿಕನ್ ಫುಲ್ ಮತ್ತು ಸಿಂಗಲ್ ಚಿಕನ್ ಬಿರಿಯಾನಿ ತಿಂದ ಕೆಲವೇ ಗಂಟೆಗಳ ನಂತರ ಯುವಕರಿಗೆ ವಾಂತಿ, ತೀವ್ರವಾದ ಹೊಟ್ಟೆ ನೋವು ಮತ್ತು ಬೇದಿ ಪ್ರಾರಂಭವಾಗಿದೆ. ಕುಟುಂಬಸ್ಥರು ಕೂಡಲೇ ಅವರನ್ನು ಮೀರ್ಪೇಟ್ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದು, ಯುವಕರನ್ನು ಪರೀಕ್ಷಿಸಿದ ವೈದ್ಯರು ಆಹಾರ ವಿಷಪೂರಿತವಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಖಚಿತಪಡಿಸಿದರು.
ಚೇತರಿಸಿಕೊಂಡ ನಂತರ, ಯುವಕರು ಮೀರ್ಪೇಟ್ ಮುನ್ಸಿಪಲ್ ಕಾರ್ಪೊರೇಷನ್ನ ಆಹಾರ ಸುರಕ್ಷತಾ ಅಧಿಕಾರಿಗಳನ್ನು ಸಂಪರ್ಕಿಸಿ ರೆಸ್ಟೋರೆಂಟ್ ವಿರುದ್ಧ ದೂರು ನೀಡಿದ್ದಾರೆ. ದೂರಿನ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಯುವಕರಿಗೆ ಭರವಸೆ ನೀಡಿದ್ದಾರೆ.