Onion price: ಈರುಳ್ಳಿ ಬೆಲೆ ದಿಢೀರ್‌ ಏರಿಕೆ; ಕ್ವಿಂಟಾಲ್​ಗೆ 500 ರೂ ಏರಿಕೆಗೆ ಗ್ರಾಹಕರು ಕಂಗಾಲು

Onion price: ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಏರಿಕೆ ಬೆನ್ನಲ್ಲೇ ಈಗ ಈರುಳ್ಳಿ ದರವೂ ದಿಢೀರ್ ಏರಿಕೆ ಆಗಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಕೇಂದ್ರವು ಈರುಳ್ಳಿ ರಫ್ತು ನಿಷೇಧ ಹಿಂದಕ್ಕೆ ಪಡೆದ ಬೆನ್ನಿಗೇ ಈ ಬೆಳವಣಿಗೆ…

Onion price

Onion price: ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಏರಿಕೆ ಬೆನ್ನಲ್ಲೇ ಈಗ ಈರುಳ್ಳಿ ದರವೂ ದಿಢೀರ್ ಏರಿಕೆ ಆಗಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ಕೇಂದ್ರವು ಈರುಳ್ಳಿ ರಫ್ತು ನಿಷೇಧ ಹಿಂದಕ್ಕೆ ಪಡೆದ ಬೆನ್ನಿಗೇ ಈ ಬೆಳವಣಿಗೆ ನಡೆದಿದೆ.

ಇದನ್ನು ಓದಿ: ನಿಮ್ಮ ಖಾತೆಗೆ 10,000ರೂ..ಹೀಗೆ ಮಾಡಿ

ಹೌದು, ದೇಶದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆ ಲಾಸಲ್ ಗಾಂವ್ APMCಯಲ್ಲಿ ಈರುಳ್ಳಿ ದರ ಶೇ.40ರಷ್ಟು ಏರಿಕೆಯಾಗಿದೆ. ಪ್ರತಿ ಕ್ವಿಂಟಾಲ್‌ ಬೆಲೆ ₹1,280-₹1,800ಕ್ಕೆ ಹೆಚ್ಚಳವಾಗಿದೆ. ಕನಿಷ್ಠ ಬೆಲೆ ₹1,000 ಹಾಗೂ ಗರಿಷ್ಠ ದರ ₹2,100 ಏರಿಕೆ ಆಗಿದೆ. ಕೇಂದ್ರ ಈರುಳ್ಳಿ ರಫ್ತು ನಿಷೇಧ ಹಿಂಪಡೆದ ಬೆನ್ನಲ್ಲೇ ಇಷ್ಟೊಂದು ಪ್ರಮಾಣದಲ್ಲಿ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಸದ್ಯ ಕೆಜಿಗೆ ₹20-₹25 ಇದೆ.

Vijayaprabha Mobile App free
Onion price
Onion price increased by Rs 500 per quintal

Onion price: ಕ್ವಿಂಟಾಲ್​ಗೆ 500 ರೂ. ಏರಿಕೆ ಕಂಡ ಈರುಳ್ಳಿ ಬೆಲೆ

ದೇಶದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾದ ಲಸಲ್​ಗಾಂವ್​ನಲ್ಲಿ ಸಾಮಾನ್ಯ ಈರುಳ್ಳಿಯ ಸಗಟು ಮಾರಾಟ ದರ ಕ್ಷಿಂಟಾಲ್​ಗೆ 1800 ರೂಪಾಯಿ ಏರಿಕೆ ಕಂಡಿದೆ. ಇದೇ ಈರುಳ್ಳಿ ದರ ಫೆ 17ರಂದು ಕ್ವಿಂಟಾಲ್​ಗೆ 1,280 ರೂಪಾಯಿ ಇದ್ದಿದ್ದು ಕೇವಲ ಮೂರೇ ದಿನಕ್ಕೆ 520 ರೂಪಾಯಿಯಷ್ಟು ಹೆಚ್ಚಳವಾಗಿದೆ.

ಇದನ್ನು ಓದಿ: LPG ಸಿಲಿಂಡರ್‌ ಸಬ್ಸಿಡಿ ಪಡೆಯಲು ಕೆವೈಸಿ ಕಡ್ಡಾಯ; KYC ಮಾಡುವುದು ಹೇಗೆ?

ಈರುಳ್ಳಿ ರಫ್ತು ನಿಷೇಧ ಮಾರ್ಚ್‌ 31ರವರೆಗೆ ಮುಂದುವರಿಕೆ: ಕೇಂದ್ರ ಸ್ಪಷ್ಟನೆ

ಈರುಳ್ಳಿ ರಫ್ತಿನ ಮೇಲಿನ ನಿಷೇಧ ಮಾರ್ಚ್ 31ರವರೆಗೂ ಮುಂದುವರೆಯಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸರ್ಕಾರವು ದೇಶೀಯ ಮಟ್ಟದಲ್ಲಿ ಈರುಳ್ಳಿಯ ಲಭ್ಯತೆಯನ್ನು ಹೆಚ್ಚಿಸಲು & ಬೆಲೆಗಳನ್ನು ನಿಯಂತ್ರಣದಲ್ಲಿಡಲು ಬಯಸುತ್ತಿದೆ. ಈ ಕಾರಣದಿಂದ ರಫ್ತು ನಿಷೇಧ ಮುಂದುವರಿಯಲಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಪಿಟಿಐಗೆ ತಿಳಿಸಿದ್ದಾರೆ. ಈ ಹಿಂದೆ ಈರುಳ್ಳಿ ದರ ಕಡಿಮೆಯಾಗಿದ್ದರಿಂದ ರಫ್ತಿನ ಮೇಲಿನ ನಿಷೇಧವನ್ನು ತೆಗೆದುಹಾಕಲಾಗುತ್ತದೆ ಎಂದು ವರದಿಯಾಗಿತ್ತು

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.