ಮಕರ ಸಂಕ್ರಾಂತಿ ದಿನದಂದು ಕುರುಬರ ದಿಕ್ಕು ಬದಲಾಗಲಿದೆ: ನಿರಂಜನಾನಂದಪುರಿ ಶ್ರೀ

ಹಾವೇರಿ : ಕನಕ ಗುರುಪೀಠದ ಪೀಠಾಧಿಪತಿ ನಿರಂಜನಾನಂದಪುರಿ ಶ್ರೀಗಳು ಮಾತನಾಡಿದ್ದು, ಮಕರ ಸಂಕ್ರಾಂತಿಯ ದಿನ ಸೂರ್ಯ ತನ್ನ ದಿಕ್ಕನ್ನು ಬದಲಿಸುತ್ತಾನೆ. ಅದೇ ದಿನ ಕುರುಬರ ದಿಕ್ಕು ಕೂಡ ಬದಲಾಗಲಿದೆ ಎಂದಿದ್ದಾರೆ. ಈ ವೇಳೆ, ನಮ್ಮ…

Niranjananandapuri Swamiji vijayaprabha

ಹಾವೇರಿ : ಕನಕ ಗುರುಪೀಠದ ಪೀಠಾಧಿಪತಿ ನಿರಂಜನಾನಂದಪುರಿ ಶ್ರೀಗಳು ಮಾತನಾಡಿದ್ದು, ಮಕರ ಸಂಕ್ರಾಂತಿಯ ದಿನ ಸೂರ್ಯ ತನ್ನ ದಿಕ್ಕನ್ನು ಬದಲಿಸುತ್ತಾನೆ. ಅದೇ ದಿನ ಕುರುಬರ ದಿಕ್ಕು ಕೂಡ ಬದಲಾಗಲಿದೆ ಎಂದಿದ್ದಾರೆ.

ಈ ವೇಳೆ, ನಮ್ಮ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂದು ಆಗ್ರಹಿಸುವ ಬಗ್ಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದೇನೆ. ಹೋರಾಟದ ಮೊದಲ ಹಂತವಾಗಿ ನವೆಂಬರ್ 8ರಂದು ಮಹಿಳಾ ಸಮಾವೇಶ ನಡೆಸುತ್ತೇವೆ ಎಂದು ನಿರಂಜನಾನಂದಪುರಿ ಶ್ರೀಗಳು ಸ್ಪಷ್ಟಪಡಿಸಿದರು.

ಫೆ.7ರಂದು ಕುರುಬ ಸಮುದಾಯದ ಬೃಹತ್ ಸಮಾವೇಶ: ಈಶ್ವರಪ್ಪ

Vijayaprabha Mobile App free

ಇನ್ನು ಸಚಿವ, ಕುರುಬ ಸಮುದಾಯದ ನಾಯಕ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿದ್ದು, ಮೈಸೂರು, ದಾವಣಗೆರೆ, ಕಲಬುರಗಿ ಹಾಗೂ ಬಾಗಲಕೋಟೆಯಲ್ಲಿ ಜಿಲ್ಲೆಗಳಲ್ಲಿ ಕುರುಬ ಸಮುದಾಯದ  ಬೃಹತ್ ಸಮಾವೇಶ ಆಯೋಜಿಸಲಿದ್ದು, ಸಮುದಾಯವನ್ನು ಎಸ್ಟಿಗೆ ಸೇರಿಸುವಂತೆ ಒತ್ತಾಯಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವೇಳೆ, ಜ.15ರಂದು ಕನಕ ಗುರುಪೀಠದ ಪೀಠಾಧಿಪತಿ ನಿರಂಜನಾನಂದಪುರಿ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹೊರಡಲಿದ್ದು, ಬೃಹತ್ ಸಮಾವೇಶ ಆಯೋಜಿಸಲಿದ್ದೇವೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ಹೇಳಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.