ಅ.25ರಂದು ಈ ವರ್ಷದ ಕೊನೆಯ ಸೂರ್ಯ ಗ್ರಹಣ; ಲಕ್ಷ್ಮೀ ಪೂಜೆ ದಿನವೇ ಸೂರ್ಯಗ್ರಹಣ ಒಳ್ಳೆಯದ್ದೋ, ಕೆಟ್ಟದ್ದೋ..!

ದೀಪಾವಳಿ ಅಮಾವಾಸ್ಯೆಯ ದಿನ ಅಂದರೆ ಅಕ್ಟೊಬರ್ 25ರಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದ್ದು, ಸಂಜೆ 4:29ಕ್ಕೆ ಆರಂಭವಾಗಿ 5:42ಕ್ಕೆ ಸೂರ್ಯಗ್ರಹಣ ಕೊನೆಗೊಳ್ಳಲಿದೆ. ಭಾರತದ ಬಹುತೇಕ ಪ್ರದೇಶಗಳಲ್ಲಿ ಗೋಚರಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದು, ಗ್ರಹಣದ ಗರಿಷ್ಠ…

solar eclipse

ದೀಪಾವಳಿ ಅಮಾವಾಸ್ಯೆಯ ದಿನ ಅಂದರೆ ಅಕ್ಟೊಬರ್ 25ರಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದ್ದು, ಸಂಜೆ 4:29ಕ್ಕೆ ಆರಂಭವಾಗಿ 5:42ಕ್ಕೆ ಸೂರ್ಯಗ್ರಹಣ ಕೊನೆಗೊಳ್ಳಲಿದೆ.

ಭಾರತದ ಬಹುತೇಕ ಪ್ರದೇಶಗಳಲ್ಲಿ ಗೋಚರಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದು, ಗ್ರಹಣದ ಗರಿಷ್ಠ ಗೋಚರತೆ ವೇಳೆ, ಅಸ್ತಂಗತವಾಗುತ್ತಿರುವ ಸೂರ್ಯನ ಬಿಂಬದ ಶೇ 4ರಷ್ಟು ಭಾಗವನ್ನು ಚಂದ್ರಬಿಂಬವು ಮುಚ್ಚಲಿದೆ ಎಂದು ಅವರು ಹೇಳಿದ್ದಾರೆ. ಇದು ಈ ವರ್ಷದ ಕೊನೆಯ ಗ್ರಹಣವಾಗಿದ್ದು, ಗ್ರಹಣವನ್ನು ಬರಿಗಣ್ಣಿನಿಂದ ನೋಡಬೇಡಿ.

ಲಕ್ಷ್ಮೀ ಪೂಜೆ ದಿನವೇ ಸೂರ್ಯಗ್ರಹಣ: ಒಳ್ಳೆಯದ್ದೋ, ಕೆಟ್ಟದ್ದೋ..

Vijayaprabha Mobile App free

ಇನ್ನು, ಅಕ್ಟೋಬರ್‌ 25 ರ ಅಮಾವಾಸ್ಯೆಯಂದು ಸಂಭವಿಸುವ ಸೂರ್ಯಗ್ರಹಣ ಭಾರತ, ಯುರೋಪ್‌ ಸೇರಿದಂತೆ ಹಲವು ದೇಶಗಳಲ್ಲಿ ಗೋಚರಿಸಲಿದೆ. ದೀಪಾವಳಿಯ ಹಬ್ಬದ ಸಮಯದಲ್ಲೇ ಈ ಗ್ರಹಣ ಸಂಭವಿಸಲಿದೆ. ಕರ್ನಾಟಕದಲ್ಲಿ ಸೂರ್ಯಗ್ರಹಣ ಸಂಜೆ 5.12ಕ್ಕೆ ಆರಂಭವಾಗಲಿದ್ದು, 5.49ಕ್ಕೆ ಗರಿಷ್ಠ ಮಟ್ಟ ತಲುಪಿ, 5.56ಕ್ಕೆ ಅಂತ್ಯವಾಗಲಿದೆ.

ಕೆಲವೆಡೆ ಲಕ್ಷ್ಮೀ ಪೂಜೆಯೂ ಅದೇ ದಿನ ಇರುವುದರಿಂದ ಗ್ರಹಣದಿಂದ ಕೆಟ್ಟದಾಗುತ್ತದೋ ಅಥವಾ ಒಳ್ಳೆಯದಾಗುತ್ತದೋ ಅನ್ನುವ ಬಗ್ಗೆ ಜ್ಯೋತಿಷಿಗಳ ನಡುವೆ ಚರ್ಚೆಯಾಗುತ್ತಿದೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.