ಪಿಂಚಣಿದಾರರಿಗೆ ಕೇಂದ್ರದಿಂದ ಸಿಹಿಸುದ್ದಿ: ಒಂದೇ ಬಾರಿಗೆ 5 ಲಕ್ಷ ರೂ ಪಡೆಯಬಹುದು!

ಪೆನ್ಷನ್ ಫಂಡ್ ರೆಗ್ಯುಲೇಟರ್ (ಪಿಎಫ್‌ಆರ್‌ಡಿಎ) ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದು, ನ್ಯಾಷನಲ್ ಪೆನ್ಷನ್ ಸಿಸ್ಟಮ್ (ಎನ್‌ಪಿಎಸ್) ಚಂದಾದಾರರಿಗೆ ಸಿಹಿಸುದ್ದಿಯನ್ನು ಒದಗಿಸಿದೆ. ಪಿಂಚಣಿ ಕಾರ್ಪಸ್ ಹಣವನ್ನು ಏಕಕಾಲದಲ್ಲಿ ಹಿಂಪಡೆಯಲು ಅನುಮತಿ ನೀಡಿದ್ದು, ಇದರಿಂದ ಅನೇಕ ಮಂದಿಗೆ ಅನುಕುಲವಾಗುತ್ತದೆ.…

money vijayaprabha news

ಪೆನ್ಷನ್ ಫಂಡ್ ರೆಗ್ಯುಲೇಟರ್ (ಪಿಎಫ್‌ಆರ್‌ಡಿಎ) ಪ್ರಮುಖ ನಿರ್ಧಾರ ತೆಗೆದುಕೊಂಡಿದ್ದು, ನ್ಯಾಷನಲ್ ಪೆನ್ಷನ್ ಸಿಸ್ಟಮ್ (ಎನ್‌ಪಿಎಸ್) ಚಂದಾದಾರರಿಗೆ ಸಿಹಿಸುದ್ದಿಯನ್ನು ಒದಗಿಸಿದೆ. ಪಿಂಚಣಿ ಕಾರ್ಪಸ್ ಹಣವನ್ನು ಏಕಕಾಲದಲ್ಲಿ ಹಿಂಪಡೆಯಲು ಅನುಮತಿ ನೀಡಿದ್ದು, ಇದರಿಂದ ಅನೇಕ ಮಂದಿಗೆ ಅನುಕುಲವಾಗುತ್ತದೆ.

ಎನ್‌ಪಿಎಸ್ (NPS) ಯೋಜನೆಗೆ ಸೇರುವವರಿಗೆ ಮುಕ್ತಾಯದ ಸಮಯದಲ್ಲಿ ಪೂರ್ಣ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಹಣದಿಂದ ಯುನಿಟಿ ಪ್ಲ್ಯಾನ್ ಖರೀದಿಸಬೇಕಾಗುತ್ತದೆ. ಇದರಿಂದ ಚಂದಾದಾರರಿಗೆ ಪ್ರತಿ ತಿಂಗಳು ಪಿಂಚಣಿ ಸಿಗುತ್ತದೆ. ಆದರೆ ಈಗ ಕೇಂದ್ರ ಸರ್ಕಾರ ಹೊಸ ನಿಯಮವನ್ನು ತಂದಿದೆ.

ಪಿಂಚಣಿ ಕಾರ್ಪಸ್ 5 ಲಕ್ಷ ರೂ.ಗಳಿದ್ದರೆ, ಪೂರ್ಣ ಮೊತ್ತವನ್ನು ಒಮ್ಮೆಗೇ ಹಿಂಪಡೆಯಬಹುದು. ಅಂದರೆ ಯೂನಿಟಿ ಪ್ಲ್ಯಾನ್ ಖರೀದಿಸುವ ಅಗತ್ಯವಿರುವುದಿಲ್ಲ. ಇಲ್ಲಿಯವರೆಗೆ ಕೇವಲ 2 ಲಕ್ಷ ರೂವರೆಗೆ ಮಾತ್ರ ಈ ಬೆನಿಫಿಟ್ ಇತ್ತು. ಅಂದರೆ ಕಾರ್ಪಸ್ ರೂ. 2 ಲಕ್ಷದವರೆಗೆ ಇದ್ದರೆ, ಮಾತ್ರ ಪೂರ್ಣ ಹಣವನ್ನು ಹಿಂಪಡೆಯಲಾಗುತ್ತಿತ್ತು. ಇನ್ನು ಮುಂದೆ 5 ಲಕ್ಷ ರೂ.ವರೆಗೆ ಹಿಂಪಡೆಯಬಹುದು.

Vijayaprabha Mobile App free

ಎನ್‌ಪಿಎಸ್ ಸ್ಕೀಮ್ ನಲ್ಲಿ ಎರಡು ರೀತಿಯ ಖಾತೆಗಳು ಇರುತ್ತವೆ. ಒಂದು ಟೈರ್ 1 ಖಾತೆ. ಎರಡನೇ ಟೈರ್ 2 ಖಾತೆ. ಟೈರ್ 1 ಎನ್‌ಪಿಎಸ್ ಖಾತೆ ಪಿಂಚಣಿ ಖಾತೆ. ಇನ್ನು ಟೈರ್ 2 ಖಾತೆ ಎನ್ನುವುದು ಇನ್ವೆಸ್ಟ್ಮೆಂಟ್ ಖಾತೆಯಾಗಿದೆ. ಪ್ರಸ್ತುತ ಯೂನಿಟಿ ಪ್ಲ್ಯಾನ್ ನಲ್ಲಿ ವಾರ್ಷಿಕ ಆದಾಯವು 5.5% ವರೆಗೆ ಲಾಭ ಸಿಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.