ರೇಷನ್‌ ಕಾರ್ಡ್‌ ಇದ್ದವರಿಗೆ ಹೊಸ ರೂಲ್ಸ್‌; ಜೂನ್‌ 30 ರೊಳಗೆ ತಪ್ಪದೇ ಈ ಕೆಲಸ ಮಾಡಿ, ಇಲ್ಲದಿದ್ದರೆ ನಿಮ್ಮ ರೇಷನ್‌ ಕಡಿತ ಪಕ್ಕಾ.!

ಈಗಾಗಲೇ ಪಾನ್‌ ಕಾರ್ಡ್‌ (pan Card)ಅನ್ನು ಆಧಾರ್‌ ಕಾರ್ಡ್‌ನೊಂದಿಗೆ (Aadhar Card) ಲಿಂಕ್‌ ಮಾಡಲು ತಿಳಿಸಿರುವ ಸರ್ಕಾರ ಜೂನ್‌ 30 ರವರೆಗೆ ವಿಸ್ತರಿಸಿ ಮತ್ತಷ್ಟು ಸಮಯವನ್ನು ಕಲ್ಪಿಸಿದೆ. ಹಾಗೆಯೇ ಬಿಪಿಎಲ್‌ (BPL Card) ಮತ್ತು…

ration card and Aadhaar card

ಈಗಾಗಲೇ ಪಾನ್‌ ಕಾರ್ಡ್‌ (pan Card)ಅನ್ನು ಆಧಾರ್‌ ಕಾರ್ಡ್‌ನೊಂದಿಗೆ (Aadhar Card) ಲಿಂಕ್‌ ಮಾಡಲು ತಿಳಿಸಿರುವ ಸರ್ಕಾರ ಜೂನ್‌ 30 ರವರೆಗೆ ವಿಸ್ತರಿಸಿ ಮತ್ತಷ್ಟು ಸಮಯವನ್ನು ಕಲ್ಪಿಸಿದೆ. ಹಾಗೆಯೇ ಬಿಪಿಎಲ್‌ (BPL Card) ಮತ್ತು ಅಂತ್ಯೋದಯ ರೇಷನ್‌ ಕಾರ್ಡ್‌ (Antyodaya Ration Card) ಹೊಂದಿರುವ ಪಡಿತರ ಚೀಟಿದಾರರಿಗೆ (Ration Card Holder) ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ. ಇನ್ನು, ಈ ನಿಯಮವನ್ನು ಪಡಿತರ ಚೀಟಿದಾರರು ಪಾಲಿಸದೇ ಇದ್ದರೆ ನಿಮ್ಮ ರೇಷನ್ ಅನ್ನು (ಆಹಾರ ದಾನ್ಯ) ಕಡಿತಗೊಳಿಸಲಾಗುತ್ತದೆ.

ಇದನ್ನು ಓದಿ: ಪಡಿತರ ಚೀಟಿ ಹೊಂದಿರುವವರಿಗೆ ಗುಡ್ ನ್ಯೂಸ್.. ಮೋದಿ ಸರ್ಕಾರ್ ಮಹತ್ವದ ನಿರ್ಧಾರ!

ಹೌದು, ಬಿಪಿಎಲ್‌ ಮತ್ತು ಅಂತ್ಯೊದಯ ರೇಷನ್‌ ಕಾರ್ಡ್‌ ಹೊಂದಿರುವ ಎಲ್ಲರಿಗೂ ಸರ್ಕಾರವು ಹೊಸ ನಿಯಮ ಜಾರಿಗೆ ತಂದಿದ್ದು, ದೇಶದ ಎಲ್ಲಾ ರೇಷನ್‌ ಪಡೆಯುವ ಪ್ರತಿಯೊಬ್ಬರಿಗೂ ಈ ನಿಯಮವನ್ನು ಪಾಲಿಸಬೇಕು ಎಂದು ಸರ್ಕಾರ ತಿಳಿಸಿದೆ. ಪಾನ್‌ ಕಾರ್ಡ್‌ ಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡದೇ ಇದ್ದರೆ ಷೇರು ಮಾರುಕಟ್ಟೆ, ಬ್ಯಾಂಕಿಂಗ್, ಟಿಡಿಎಸ್‌, ಟಿಸಿಎಸ್‌ ಸೇರಿದಂತೆ ಎಲ್ಲಾ ವ್ಯವಹಾರವನ್ನು ಹೇಗೆ ಕಡಿತಗೊಳಿಸಲಾಗುತ್ತದೆಯೋ ಹಾಗೆಯೇ ರೇಷನ್‌ ಕಾರ್ಡ್‌ ಈ ನಿಯಮವನ್ನು ಪಾಲಿಸದೇ ಇದ್ದಲ್ಲಿ ನಿಮ್ಮ ರೇಷನ್‌ ಅನ್ನು (ಆಹಾರ ದಾನ್ಯ) ಕಡಿತಗೊಳಿಸಲಾಗುತ್ತದೆ. ಇನ್ನು, ಪ್ರತಿ ತಿಂಗಳು ರೇಷನ್‌ ಪಡೆಯುವ ಎಲ್ಲಾ ಪಡಿತರ ಚೀಟಿದಾರರು ಇಂದರಿಂದ ತೊಂದರೆ ಅನುಭವಿಸಬೇಕಾಗುತ್ತದೆ.

Vijayaprabha Mobile App free

ಇದನ್ನು ಓದಿ: ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದೀರಾ? ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆ ಬಂದ್, ನಿಮ್ಮ ಹಣ ಪಡೆಯಲು ಸಾಧ್ಯವಿಲ್ಲ!

ಪ್ರತಿಯೊಬ್ಬ ಬಿಪಿಎಲ್‌ ಮತ್ತು ಎಪಿಎಲ್‌, ಅಂತ್ಯೋದಯ ರೇಷನ್‌ ಕಾರ್ಡ್‌ ಹೊಂದಿರುವ ಎಲ್ಲಾ ಪಡಿತರ ಚೀಟಿದಾರರು ರೇಷನ್‌ ಕಾರ್ಡ್‌ಗೆ ಆಧಾರ್‌ ಜೊತೆ ಲಿಂಕ್‌ (link ration card with Aadhaar) ಮಾಡಿಸದೇ ಇದ್ದರೆ ಅಂತವರ ಪರಿತರವನ್ನು ಕಡಿತಗೊಳಿಸಲು ಸರ್ಕಾರ ತಿಳಿಸಿದೆ. ಈ ಹಿಂದೆಯೇ ಸರ್ಕಾರ ಆಧಾರ್‌ ಕಾರ್ಡ್‌ ಅನ್ನು ರೇಷನ್‌ ಕಾರ್ಡ್‌ ಜೊತೆ ಜೋಡಿಸಲು ತಿಳಿಸಿತ್ತು ಹಾಗೆಯೇ ಲಿಂಕ್ ಮಾಡಲು ಮಾರ್ಚ್‌ 31 ರಂದು ಕೊನೆಯ ದಿನಾಂಕವಾಗಿತ್ತು. ಆದರೆ, ಆಧಾರ್‌ ಕಾರ್ಡ್‌ ಅನ್ನು ರೇಷನ್‌ ಕಾರ್ಡ್‌ ಜೊತೆ ಜೋಡಿಸಲು ಕೊನೆಯ ದಿನಾಂಕವನ್ನು ಮುಂದೂಡಲಾಗಿದೆ.

ಇದನ್ನು ಓದಿ: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್; ಬರೋಬ್ಬರಿ 1,30,000 ಹುದ್ದೆಗಳ ಭರ್ತಿಗೆ ಅಧಿಸೂಚನೆ!

ಹೌದು, ಸರ್ಕಾರ ನಿಮ್ಮ ರೇಷನ್‌ ಕಾರ್ಡ್‌ ಅನ್ನು ಆಧಾರ್‌ ಜೊತೆ ಲಿಂಕ್‌ ಮಾಡಿಸಲು ಈಗ ಜೂನ್‌ 30 ರವರೆಗೆ ವಿಸ್ತರಿಸಿ ಮತ್ತಷ್ಟು ಸಮಯವನ್ನು ಕಲ್ಪಿಸಿದ್ದು, ಪಡಿತರ ಚೀಟಿಯನ್ನು ಆಧಾರ್ ನೊಂದಿಗೆ ಲಿಂಕ್‌ ಮಾಡುವುದು ರೇಷನ್‌ ಕಾರ್ಡ್‌ ಹೊಂದಿರುವವರು ಮಾಡಲೇಬೇಕಾದ ಅನಿವಾರ್ಯವಾಗಿದೆ.ಸರ್ಕಾರದಿಂದ ಬರುವಂತಹ ಸೌಲಭ್ಯವನ್ನು ಯಾರಿಗೆ ಸೇರಬೇಕೋ ಅವರಿಗೆ ಸೇರಲು ಇದೊಂದು ಸರಿಯಾದ ಮಾರ್ಗವಾಗಿದೆ ಎಂದು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಮಹತ್ವದ ಸುದ್ದಿ, ದೇಶದಾತ್ಯಂತ ಹೊಸ ನಿಯಮ ಜಾರಿ!

ಸರ್ಕಾರದಿಂದ ಪೂರೈಸುವ ಅಗತ್ಯ ವಸ್ತುಗಳನ್ನು (ಆಹಾರ ದಾನ್ಯಗಳನ್ನು) ಮತ್ತು ಇತರೆ ಸರ್ಕಾರೀ ಸೌಲಭ್ಯಗಳನ್ನು ಅರ್ಹ ಪಲಾನುಭವಿಗಳಿಗೆ ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ನಕಲಿ ಪಡಿತರ ಚೀಟಿಗಳನ್ನು ಸಂಪೂರ್ಣವಾಗಿ ತಡೆಯಲು ಪಡಿತರ ಚೀಟಿಗೆ ಅಧಾರ್‌ ಕಾರ್ಡ್‌ ಲಿಂಕ್‌ ಮಾಡುವುದರಿಂದ ತಪ್ಪನ್ನು ಸರಿಪಡಿಸಬಹುದಾಗಿದೆ. ಆದರೆ ಜನರಿಗೆ ತೊಂದರೆಯಾಗದಂತೆ ಪಡಿತರ ಚೀಟಿಗೆ ಅಧಾರ್‌ ಕಾರ್ಡ್‌ ಲಿಂಕ್‌ ಮಾಡುವ ಗಡುವನ್ನು ವಿಸ್ತರಿಸಲಾಗಿದ್ದು, ಜೂನ್‌ 30 ರವರೆಗೆ ನೀವು ನಿಮ್ಮ ಆಧಾರ್‌ ಕಾರ್ಡ್‌ ಅನ್ನು ರೇಷನ್‌ ಕಾರ್ಡ್‌ ಗೆ ಲಿಂಕ್‌ ಮಾಡಿಸಬಹುದಾಗಿದೆ.

ಇದನ್ನು ಓದಿ: EPFO​​ನಲ್ಲಿ 2859 ಹುದ್ದೆಗಳಿಗೆ ಬಂಪರ್ ನೇಮಕಾತಿ: ಪಿಯುಸಿ, ಪದವಿ ವಿದ್ಯಾರ್ಹತೆ, ಇಂದೇ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.