ಬೆಂಗಳೂರು: ಅಕ್ರಮವಾಗಿ ಸರ್ಕಾರದ ಮಾನದಂಡಗಳಿಗೆ ವಿರುದ್ಧವಾಗಿ, ಅಂತ್ಯೋದಯ ಮತ್ತು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರೆ ಅವುಗಳನ್ನು ಜೂನ್ 30ರೊಳಗೆ ಸಂಬಂಧಪಟ್ಟ ತಹಶೀಲ್ದಾರ್ ಗಳಿಗೆ ಹಿಂದಿರುಗಿಸಿ, ಬಳಿಕ ಸಂಬಂಧಪಟ್ಟ ಕಾರ್ಡ್ ಪಡೆಯಲು ಆಹಾರ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.
ಹೌದು, ಸರ್ಕಾರಿ ಮತ್ತು ಅನುದಾನಿತ ಕಾಯಂ ನೌಕರರು, ಆದಾಯ ತೆರಿಗೆ ಪಾವತಿಸುವವರೂ, ನಗರ ಪ್ರದೇಶದಲ್ಲಿ 1000 ಅಡಿಗಿಂತ ಅಧಿಕ ವಿಸ್ತೀರ್ಣದ ಮನೆ ಹೊಂದಿರುವವರೂ ಅಕ್ರಮವಾಗಿ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ಹೊಂದಿದ್ದರೆ, ಇಂತವರು ಕಾರ್ಡ್ ಗಳನ್ನು ಸಂಬಂಧ ಪಟ್ಟ ತಹಶೀಲ್ದಾರ್ ಗಳಿಗೆ ಜೂನ್ 30 ರೊಳಗೆ ಹಿಂದಿರುಗಿಸಬೇಕು, ಇಲ್ಲದಿದ್ದರೆ ಇಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.